ಅಂಗಡಿ ಶಟರ್ ಮುರಿದು ಚಿನ್ನಾಭರಣ ಕಳವು

27MDLG1
Published on

ಮೂಡಲಗಿ: ತಾಲೂಕಿನ ಯಾದವಾಡ ಗ್ರಾಮದ ಮಹಾಲಕ್ಷ್ಮೀ ಜುವೇಲರ್ಸ್ ಅಂಗಡಿ ಶಟರ್ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಗ್ರಾಮದ ಸಂದೀಪ ಶಿಂಧೆ ಎಂಬುವವರ ಅಂಗಡಿಯಲ್ಲಿ ಕಳ್ಳತನ ನಡೆದಿದೆ. ನ.26ರಂದು ರಾತ್ರಿ ಮುಚ್ಚಿದ ಅಂಗಡಿಯನ್ನು ಕಳ್ಳರು ಶಟರ್ ಮುರಿದು ಲಕ್ಷಾಂತರ ಮೌಲ್ಯದ ಆಭರಣ ಕಳವು ಮಾಡಿದ್ದಾರೆ. ಆದರೆ, ಇನ್ನು ಅಂಗಡಿಯಲ್ಲಿ ಇದ್ದ ಚಿನ್ನಾಭರಣದ ಲಾಕರ್ ಒಡೆಯಲಾಗದೇ ಕಳ್ಳರು ಹೊರಗಡೆ ಇರುವ 9ಕೆಜಿ ಬೆಳ್ಳಿ ಆಭರಣ, 9ರಿಂದ 10 ತೊಲಿ ಹಳೆ ಚಿನ್ನದ ಆಭರಣ ಕಳ್ಳತನ ಮಾಡಿದ್ದಾರೆ. ಇಬ್ಬರ ಕಳ್ಳರ ಚಲನವಲನ, ಕಳ್ಳತನ ಮಾಡುತ್ತಿರುವ ದಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರುತಿ ಎನ್. ಎಸ್, ಡಿವೈಎಸ್ಪಿ ದೂದಪೀರ್ ಮುಲ್ಲಾ, ಸಿಪಿಐ ಶ್ರೀಶೈಲ ಬ್ಯಾಕೂಡ, ಕ್ರೈಂ ಪಿಎಸ್‌ಐ ವಿ.ವಿ.ಉತ್ತರೇಶ್ವರ ಹಾಗೂ ಶ್ವಾನ ದಳ, ಬೆರಳಚ್ಚು ತಜ್ಞರಿಂದ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net