ಟೀ ಅಂಗಡಿ ಬೀಗ ಮುರಿದು 58 ಸಾವಿರ ರೂ. ವಸ್ತು ಕಳ್ಳತನ

Thief
Published on

ಬ್ಯಾಡಗಿ: ಟೀ ಅಂಗಡಿಯ ಬೀಗ ಮುರಿದು 21 ಸಾವಿರ ರೂ. ನಗದು ಸೇರಿ 58 ಸಾವಿರ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿರುವ ಟನೆ ಪಟ್ಟಣದ ಮೋಟೆಬೆನ್ನೂರ ರಸ್ತೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.
ರಾಮಪ್ಪ ಕೋಟೆಯವರ ಎಂಬುವರಿಗೆ ಸೇರಿ ಟೀ ಅಂಗಡಿ ಕಳ್ಳತನ ಆಗಿರುವುದು.
ರಾತ್ರಿ ಸಮಯದಲ್ಲಿ ಟೀ ಅಂಗಡಿಯ ಬೀಗ ಮುರಿದು ಒಳಗೆ ನುಗ್ಗಿದ ಕಳ್ಳರು ಟೀ ಥರ್ಮಸ್​, ಗ್ಯಾಸ್​ಸ್ಟೋವ್​, ಯುಪಿಎಸ್​ ಬ್ಯಾಟರಿ, ಬಲ್ಪ್​ ಸೇರಿ ಇತರ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಬ್ಯಾಡಗಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net