ಅಂಗಡಿಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯ

01 KAMPLI 01
ಕಂಪ್ಲಿ ತಹಸೀಲ್ದಾರ್ ಆವರಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವದಲ್ಲಿ ಲೇಖಕ ರಾಜುಬಿಲಂಕರ್ ಸೇರಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಪ್ರಮುಖರಾದ ಎಸ್.ಶಿವರಾಜ, ಆರ್.ಕೆ.ಶ್ರೀಕುಮಾರ್, ಕೆ.ಎಸ್.ಮಲ್ಲನಗೌಡ, ಕೆ.ದುರುಗಣ್ಣ ಇತರರಿದ್ದರು.
Published on

ಕಂಪ್ಲಿ: ನಿತ್ಯ ಜೀವನದಲ್ಲಿ ಕನ್ನಡ ಬಳಸುವ ಮೂಲಕ ಭಾಷೆ ಉಳಿಸೋಣ ಎಂದು ತಹಸೀಲ್ದಾರ್ ಎಸ್.ಶಿವರಾಜ ಹೇಳಿದರು. ನಗರದಲ್ಲಿ ಶುಕ್ರವಾರ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ನಿಮಿತ್ತ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಟ್ಟಣದಲ್ಲಿನ ಅಂಗಡಿಗಳ ನಾಮಫಲಕವನ್ನು ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿಯೇ ಹಾಕಿಸಬೇಕು. ತಪ್ಪಿದಲ್ಲಿ ತಕ್ಕ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು.

ಹನಿಗವನ ಲೇಖಕ ರಾಜು ಬಿಲಂಕರ್, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ ಪೂರ್ಣ ಅಂಕಗಳಿಸಿದ ಪ್ರತಿಭಾನ್ವಿತರಿಗೆ ಗೌರವಿಸಲಾಯಿತು.

ಸೋಮಪ್ಪ ದೇವಸ್ಥಾನದಿಂದ ಶ್ರೀಭುವನೇಶ್ವರಿ ಪ್ರತಿಮೆಯ ಮೆರವಣಿಗೆ ಆರಂಭಗೊಂಡಿತು. ಹಗಲುವೇಷಗಾರರು, ತಾಷಾರಾಂಡೋಲು, ಮಂಗಳವಾಧ್ಯಗಳು, ಕನ್ನಡ ಬಾವುಟ ಹಿಡಿದ ಶಾಲಾಮಕ್ಕಳು ಸೇರಿ ಕೃಷಿ, ಶಿಶು ಅಭಿವೃದ್ದಿ, ಆರೋಗ್ಯ ಇಲಾಖಾ ಕಾರ್ಯಕ್ರಮಗಳ ಭಿತ್ತಿಚಿತ್ರಗಳ ವಾಹನಗಳು ಪಾಲ್ಗೊಂಡಿದ್ದವು.

ಪ್ರಮುಖರಾದ ಕರೇಕಲ್ ಮನೋಹರ, ಕ.ಮ.ಹೇಮಯ್ಯಸ್ವಾಮಿ, ಪಿ.ಬ್ರಹ್ಮಯ್ಯ, ಬಿ.ರಮೇಶ್, ಆರ್.ಕೆ.ಶ್ರೀಕುಮಾರ್, ಕೆ.ಎಸ್.ಮಲ್ಲನಗೌಡ, ಕೆ.ದುರುಗಣ್ಣ, ಟಿ.ಎಂ.ಬಸವರಾಜ, ಪಿ.ಬಸವರಾಜ, ಕೆ.ವಿರುಪಾಕ್ಷಪ್ಪ, ಆರ್.ಅಂಜಿನೇಯ, ಭಟ್ಟಪ್ರಸಾದ್, ಟಿ.ವಿ.ಸುದರ್ಶನ ರೆಡ್ಡಿ, ಷಣ್ಮುಖಪ್ಪ ಚಿತ್ರಗಾರ, ಬಿ.ಅಂಬಣ್ಣ, ಕೆ.ಮನೋಹರ, ಅರವಿ ಬಸವನಗೌಡ, ಎಸ್.ಡಿ.ಬಸವರಾಜ, ಬಿ.ವಿ.ಗೌಡ, ಕೊಟ್ಟೂರು ರಮೇಶ, ಕೆ.ರಂಗಪ್ಪ, ಬಡಿಗೇರ ಜಿಲಾನ್‌ಸಾಬ್, ಹಾದಿಮನಿ ಕಾಳಿಂಗವರ್ಧನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net