ಅಂಗಡಿ ಮಹಾವಿದ್ಯಾಲಯದ ಬೋಧಕರಿಗೆ ಕೋವಿಡ್ ಪರೀಕ್ಷೆ

20 Jaggu 15-Web
ಬೆಳಗಾವಿ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ವಡಗಾವಿ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಯಿತು.
Published on

ಬೆಳಗಾವಿ: ನಗರದ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಿ ಕಾಲೇಜ್ ಪ್ರಾರಂಭಿಸಲಾಯಿತು. ಎನ್‌ಎಸ್‌ಎಸ್, ರೆಡ್‌ಕ್ರಾಸ್ ಘಟಕಗಳ ಸಹಯೋಗದಲ್ಲಿ ವಡಗಾವಿಯ ಆರೋಗ್ಯ ಕೇಂದ್ರದಲ್ಲಿ ಡಾ.ಸುಶಾಂತ ಅವರ ನೇತೃತ್ವದಲ್ಲಿ ಕಾಲೇಜ್‌ನ 180 ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ಕೋವಿಡ್-19 ಪರೀಕ್ಷೆ ನಡೆಸಲಾಯಿತು.

ವರದಿ ನೆಗೆಟಿವ್ ಬಂದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ಕಾಲೇಜ್ ಒಳಗೆ ಬಿಡಲಾಯಿತು. ಪ್ರಾಚಾರ್ಯ ಡಾ. ಆನಂದ ದೇಶಪಾಂಡೆ, ಆಡಳಿತಾಧಿಕಾರಿ ರಾಜು ಜೋಶಿ ಮಾತನಾಡಿ, ಕಾಲೇಜ್‌ಗೆ ಬರುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ತಿಳಿಸಿದರು.

ಬೋಧಕರು ಫೇಸ್ ಶೀಲ್ಡ್ ಹಾಕಿಕೊಂಡು ತರಗತಿ ನಡೆಸುವ ಬಗ್ಗೆ ವಿವರಿಸಿದರು. ವಿದ್ಯಾರ್ಥಿಗಳನ್ನು ಶೇ. 50ರಂತೆ ವಿಭಾಗಿಸಿ, ನಿಗದಿ ಪಡಿಸಿದ ಸಮಯದಲ್ಲಿ ಹಾಜರಾಗಲು ಸೂಚಿಸಿದರು. ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಪ್ರೊ.ಕಿರಣ ಪೋತದಾರ, ರೆಡ್‌ಕ್ರಾಸ್‌ನ ಡಾ.ವಿಜಯ ಕುಲಕರ್ಣಿ, ಟಾಸ್ಕ್‌ಪೋರ್ಸ್ ಅಧಿಕಾರಿಗಳಾದ ಪ್ರೊ.ಅನಿಲಕುಮಾರ ಕೋರಿಶೆಟ್ಟಿ, ಪ್ರೊ. ವಿನಾಯಕ ಜೋಶಿ, ಪ್ರೊ.ಸದಾನಂದ ದೊಡಮನಿ, ಪ್ರೊ.ರವಿ ತಿಳಗಂಜಿ ಪರೀಕ್ಷೆಗೆ ಒಳಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net