ಮುತ್ತಪ್ಪ ರೈ ಮನಗ ಮೇಲೆ ಶೂಟೌಟ್

71572911-3ed7-4769-b5d0-0a9594369b6a-1.jpg
Published on

ಬಿಡದಿ: ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಮುತ್ತಪ್ಪ ರೈ ಅವರ ಮಗನ ಮೇಲೆ ದುಷ್ಪರ್ಮಿಗಳು ಶೂಟೌಟ್ ಮಾಡಿದ್ದಾರೆ. ಬಿಡದಿಯ ಮುತ್ತಪ್ಪ ರೈ ಮನೆಯ ಮುಂಭಾಗ ಶೂಟೌಟ್ ನಡೆದಿದೆ.

ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲೆ ಮಧ್ಯರಾತ್ರಿ 1:30 ರ ಸುಮಾರಿನಲ್ಲಿ ಶೂಟೌಟ್ ನಡೆದಿದೆ. ಬಿಡದಿ ಮನೆ ಇಂದ ಬೆಂಗಳೂರಿಗೆ ಹೋಗ್ತಿದ್ದ ರಿಕ್ಕಿ ರೈ. ಈ ವೇಳೆ ಮನೆ ಹೊರಗಡೆಯ ಕೌಂಪೌಡ್ ಬಳಿ ಶೂಟೌಟ್ ಮಾಡಲಾಗಿದೆ. ಡ್ರೈವರ್ ಹಾಗೂ ಗನ್ ಮ್ಯಾನ್ ಜೊತೆ ಫರ್ಚೂನರ್ ಕಾರ್ ನಲ್ಲಿ ರಿಕ್ಕಿ ರೈ ಬೆಂಗಳೂರಿಗೆ ತೆರಳುತ್ತಿದ್ದರು. ದುಷ್ಕರ್ಮಿಗಳು ಮೂರು ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ. ಬಿಡದಿಯ ಖಾಸಗಿ ಆಸ್ಪತ್ರಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಮುಖ, ಕೈ ಸೇರಿದಂತೆ ಇತರೆ ಭಾಗಗಳಲ್ಲಿ ಗಾಯಗಳಾಗಿವೆ.

ಘಟನಾ ಸ್ಥಳಕ್ಕೆ ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ, ಡಿವೈಎಸ್ಪಿ ಶ್ರೀನಿವಾಸ್ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net