ಶೂಟಿಂಗ್ ಸ್ಪರ್ಧೆ: ಧನ್ವಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

DHANVI
Published on

ಮಡಿಕೇರಿ: ಪಶ್ಚಿಮ ಬಂಗಾಳದ ಅಸನ್ ಸೋಲ್‌ನಲ್ಲಿ ಇತ್ತೀಚೆಗೆ ನಡೆದ ೩೨ನೇ ಆಲ್ ಇಂಡಿಯಾ ಜಿ.ವಿ ಮೌಲಾಂಕರ್ ಶೂಟಿಂಗ್ ಚಾಂಪಿಯನ್ ಶಿಪ್‌ನ ೧೦ ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ನಗರದ ಕೊಡಗು ವಿದ್ಯಾಲಯದ ೮ನೇ ತರಗತಿ ವಿದ್ಯಾರ್ಥಿನಿ ಕಾನಡ್ಕ ಧನ್ವಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.


ಈಕೆ ಈ ಹಿಂದೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಎನ್.ಆರ್ ವಿಭಾಗದಲ್ಲಿ ಭಾಗವಹಿಸಿ ೧೬ ವರ್ಷದೊಳಗಿನ ಸಬ್ ಯೂತ್ ವಿಭಾಗದಲ್ಲಿ ೪ನೇ ಸ್ಥಾನ ಮತ್ತು ೧೯ ವರ್ಷದೊಳಗಿನ ಯೂತ್ ವಿಭಾಗದಲ್ಲಿ ೫ನೇ ಸ್ಥಾನಗಳಿಸಿದ್ದರು. ಧನ್ವಿ ಮರಗೋಡಿನ ಕೃಷಿಕ ಕಾನಡ್ಕ ಹನೀಶ್ ಹಾಗೂ ಆಶಾ ದಂಪತಿಯ ಪುತ್ರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net