ವೈರಸ್ ಹರಡುವವರನ್ನು ಗುಂಡಿಟ್ಟು ಸಾಯಿಸಿ: ಶಾಸಕ ರೇಣುಕಾಚಾರ್ಯ

Renukacharya MP
Published on

ದಾವಣಗೆರೆ: ಕರೊನಾ ವೈರಸ್ ಹರಡುವವರನ್ನು ಗುಂಡಿಟ್ಟು ಸಾಯಿಸಿದರೂ ತಪ್ಪೇನಿಲ್ಲ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ವೈರಾಣು ವಿರುದ್ಧ ಇಡೀ ದೇಶ ಹೋರಾಡುತ್ತಿರುವಾಗ ವೈರಸ್ ಹರಡುವುದು ದೇಶದ್ರೋಹ. ಇದು ಪರೋಕ್ಷ ಭಯೋತ್ಪಾದನೆ ಎಂದರು. ಚಿಕಿತ್ಸೆ ಅಗತ್ಯವಿದ್ದವರು ಆಸ್ಪತ್ರೆಗೆ ದಾಖಲಾಗಲು, ಕ್ವಾರಂಟೈನ್​ನಲ್ಲಿ ಇರಲು ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಹಲವು ಬಾರಿ ಕೋರಿದ್ದಾರೆ. ಆದರೂ ದೆಹಲಿಯ ತಬ್ಲಿಘಿ ಜಮಾತ್ ಸಭೆಯಲ್ಲಿ ಪಾಲ್ಗೊಂಡಿದ್ದ ಕೆಲವರು ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಮುಖಂಡರು ಅಂಥವರಿಗೆ ಬುದ್ಧಿ ಹೇಳಬೇಕು ಎಂದರು.

ಕಾನೂನುಕ್ರಮ ಎಚ್ಚರಿಕೆ ಕೊಡಬೇಕಾದದ್ದು ಕರೊನಾ ಹಬ್ಬಿಸುವ ಮತಾಂಧರಿಗೆ ಹೊರತು ದೇಶಭಕ್ತ ಸಮುದಾಯಕ್ಕಲ್ಲ. ತಬ್ಲಿಘಿ ಜಿಹಾದಿಗಳಿಗೆ ಅಂತಿಮ ಎಚ್ಚರಿಕೆ ಕೊಡಿ, ಸಹಕರಿಸದಿದ್ದರೆ ಗುಂಡಿಕ್ಕಿ. ಇದು ಪ್ರಚೋದನೆ ಎನಿಸಿದರೆ ನನ್ನ ಮೇಲೆ ಕ್ರಮಕೈಗೊಳ್ಳಿ. | ಬಸನಗೌಡ ಯತ್ನಾಳ್ ಬಿಜೆಪಿ ಶಾಸಕhttps://www.vijayavani.net/super-pink-moon-rises-tonight-teach-your-kids-about-the-biggest-full-moon-of-2020/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net