ಸಹೋದರರಿಬ್ಬರಿಗೆ ಚಪ್ಪಲಿ ಸೇವೆ

1676032968632
Published on

ವಿಜಯಪುರ: ತಾಂಡಾ ಮಹಿಳೆಯೊಬ್ಬಳ ಮೇಲೆ ಇಬ್ಬರು ಸಹೋದರರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಆರೊಪಿಸಿ ಯುವಕರ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ಗ್ರಾಮದಲ್ಲಿ ಮೆರವಣಿಗೆ ನಡೆಸಿದ ಘಟನೆ ವಿಜಯಪುರ ತಾಲೂಕಿನ ಹೆಗಡಿಹಾಳ ತಾಂಡಾದಲ್ಲಿ ನಡೆದಿದೆ. ಈ ಹಿಂದೆ ಮಹಿಳೆ ಹಾಗೂ ಈ ಯುವಕರು ಮಹಾರಾಷ್ಟ್ರದಲ್ಲಿ ಒಂದೇಕಡೆ ಕೆಲಸಕ್ಕೆ ಹೋಗಿದ್ದಾಗ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಇಬ್ಬರು ಸಹೋದರರನ್ನು ಲಂಬಾಣಿ ಸಮುದಾಯದ ಮುಖಂಡರು ಅವರ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ ನಡೆಸಿದ್ದಾರೆ. ಹೆಗಡಿಹಾಳ ತಾಂಡಾ ನಿವಾಸಿಗಳಾದ ತೇಜು ಚವಾಣ್ ಹಾಗೂ ರಾಜು ಚವಾಣ್ ಈ ಇಬ್ಬರು ಯುವಕರ ತಲೆ ಬೋಳಿಸಿ ಮೆರವಣಿಗೆ ನಡೆಸಲಾಗಿದೆ. ಅವಳಿ ಜವಳಿ ಸಹೋದರರಾಗಿರುವ ಇಬ್ಬರು ಸಹೋದರರನ್ನು ಗ್ರಾಮದ ಮುಖಂಡರ ಸಮಕ್ಷಮದಲ್ಲಿ ತಲೆ ಬೋಳಿಸಿ ಮೆರವಣಿಗೆ ನಡೆಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net