

Shocking Incident : ತಡರಾತ್ರಿ ನಿರ್ಜನ ರಸ್ತೆಯಲ್ಲಿ ಒಬ್ಬಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ಯುವತಿ ಮೇಲೆ ಎರಗಿದ ವ್ಯಕ್ತಿಯೊಬ್ಬ, ಆಕೆಯ ಖಾಸಗಿ ಅಂಗಾಂಗ ಸ್ಪರ್ಶಿಸಿ, ಅನುಚಿತ ವರ್ತೆನೆ ಮಾಡಿರುವ ಅಘಾತಕಾರಿ ಘಟನೆ ಬೆಂಗಳೂರಿನ ಸುದ್ದೆಗುಂಟೇಪಾಳ್ಯದಲ್ಲಿ ನಡೆದಿದೆ.
ಈ ಘಟನೆಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಏ.4ರ ಬೆಳಗಿನ ಜಾವ 2 ಗಂಟೆಗೆ ನಡೆದಿದೆ. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಲೈಂಜಗಿಕ ದೌರ್ಜನ್ಯ ಕಾಯ್ದೆಯಡಿ ಇತನ ವಿರುದ್ಧ ಸುದ್ದೆಗುಂಟೇಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲಸ ಮುಗಿಸಿಕೊಂಡು ಹುಡುಗಿಯರು ರಾತ್ರಿ ವೇಳೆ ಮನೆಗೆ ಅಥವಾ ಪಿಜಿಗೆ ನಡೆದುಕೊಂಡು ಬರುತ್ತಾರೆ. ಹುಡುಗ ಆ ರೀತಿ ಮಾಡಬಾರದಿತ್ತು. ಕೃತ್ಯ ಎಸಗಿದ ವ್ಯಕ್ತಿ ಯಾರು ಅಂತ ಗೊತ್ತಾಗಿಲ್ಲ. ಇಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಮಹಿಳಾ ಇನ್ಫ್ಲುಯೆನ್ಸರ್ ಒಬ್ಬರು ವ್ಲಾಗ್ ಮಾಡುವಾಗ ಬಾಲಕನೊಬ್ಬ ಆಕೆಯ ಎದೆಯನ್ನು ಸ್ಪರ್ಶಿಸಿ ಓಡಿ ಹೋದ ಘಟನೆ ಬಿಟಿಎಂ ಲೇಔಟ್ನಲ್ಲಿ ನಡೆದಿತ್ತು. ಇದೀಗ ಅಂಥದ್ದೇ ಘಟನೆ ಮತ್ತೆ ನಗರದಲ್ಲಿ ಸಂಭವಿಸಿದೆ.