

ಜಯವಾಣಿ ಸುದ್ದಿಜಾಲ ಧಾರವಾಡ
ಶ್ರೀರಾಮ ನವಮಿ ಅಂಗವಾಗಿ ನಗರದ ಮಾಳಮಡ್ಡಿಯ ವನವಾಸಿ ಶ್ರೀ ರಾಮ ಮಂದಿರ ಟ್ರಸ್ಟ್ ವತಿಯಿಂದ ಏ. 17ರಂದು ಸಂಜೆ 4 ಗಂಟೆಗೆ ಬೃಹತ್ ಶೋಭಾಯಾತ್ರೆ ಏರ್ಪಡಿಸಲಾಗಿದೆ.
ಶ್ರೀಮದ್ ವಾಲ್ಮೀಕಿ ರಾಮಾಯಣ ಗ್ರಂಥಗಳು, ಶ್ರೀರಾಮ ದೇವರ ಭಾವಚಿತ್ರದ ಶೋಭಾಯಾತ್ರೆಯು ಶ್ರೀ ಸುವಿಧ್ಯೇಂದ್ರತಿರ್ಥ ಶ್ರೀಪಾದರ ಸಾನ್ನಿಧ್ಯದಲ್ಲಿ ನಡೆಯಲಿದೆ. ಕೋರ್ಟ್ ವೃತ್ತದಿಂದ ಆರಂಭವಾಗುವ ಯಾತ್ರೆ, ಮುಖ್ಯ ಅಂಚೆ ಕಚೇರಿ ವೃತ್ತ, ಎಮ್ಮಿಕೇರಿ ಮಾರ್ಗವಾಗಿ ಶ್ರೀರಾಮ ಮಂದಿರ ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ.