

ನೆಲಮಂಗಲ: ಸಂಕಷ್ಟದಲ್ಲಿ ಸಿಲುಕಿದ್ದ ಹೋಟೆಲ್ ಕಾರ್ಮಿಕರ ಕರೆಗೆ ಸ್ಪಂದಿಸಿದ ಸಂಸದೆ ಶೋಭಾ ಕರಂದ್ಲಾಜೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದರು.
ಪಟ್ಟಣದ ಪೇಟೆ ಬೀದಿಯಲ್ಲಿನ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಕುಂದಾಪುರ ಮೂಲದ 10 ಕಾರ್ಮಿಕರು ಲಾಕ್‌ಡೌನ್‌ನಿಂದ ತೊಂದರೆಗೆ ಸಿಲುಕಿದ್ದು, ಮಂಗಳವಾರ ಶೋಭಾ ಕರಂದ್ಲಾಜೆ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಆಹಾರ ಸಾಮಗ್ರಿಗಳ ಕೊರತೆ ಬಗ್ಗೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಸಂಸದೆ ಬುಧವಾರ ಬೆಳಗ್ಗೆ ಹೋಟೆಲ್ ಬಳಿಗೆ ಬಂದು ಆಹಾರ ಸಾಮಗ್ರಿ ಕಿಟ್ ವಿತರಿಸಿದರು.
ಸಂಕಷ್ಟಕ್ಕೆ ಸಿಲುಕಿರುವ ಜನತೆ ಪರವಾಗಿ ಸರ್ಕಾರವಿದ್ದು ಆತಂಕಪಡುವ ಅಗತ್ಯವಿಲ್ಲ. ಮನೆಗಳಲ್ಲಿಯೇ ಇದ್ದು, ಸೋಂಕು ಹರಡುವುದನ್ನು ತಪ್ಪಿಸಬೇಕಾಗಿದೆ. ಹೆಚ್ಚಿನ ಸಹಕಾರ ಅಗತ್ಯವಿದಲ್ಲಿ ಸ್ಥಳೀಯ ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಎಂದು ತಿಳಿಸಿದರು.
ನಗರಠಾಣೆ ಎಸ್‌ಐ ಡಿ.ಆರ್.ಮಂಜುನಾಥ್, ಮುಖಂಡ ಬಿ.ರುದ್ರಸ್ವಾಮಿ ಮತ್ತಿತರರಿದ್ದರು.