

ಮುಂಡರಗಿ: ತಾಲೂಕಿನ ಮುರುಡಿ ಗ್ರಾ.ಪಂ.ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಮೊದಲನೇ ಅವಧಿಯ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಶೋಭಾ ಚಂದ್ರಶೇಖರ ಕೊಡ್ಲಿ ಹಾಗೂ ಉಪಾಧ್ಯಕ್ಷೆಯಾಗಿ ರೇಖಾ ಬಸವರಾಜ ಭಜಂತ್ರಿ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ಶೋಭಾ ಕೊಡ್ಲಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರೇಖಾ ಭಜಂತ್ರಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ಅಧಿಕಾರಿ ತಾ.ಪಂ.ಇಒ ವಿಶ್ವನಾಥ ಹೊಸಮನಿ ಅವರು ಅವಿರೋಧ ಆಯ್ಕೆ ಘೋಷಿಸಿದರು.
ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ಯನ್ನು ಅಭಿನಂದಿಸಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು.
ರೋಣ ಪುರಸಭೆ ಉಪಾಧ್ಯಕ್ಷ ಮಿಥುನಗೌಡ ಪಾಟೀಲ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಎಲ್ಲ ಸದಸ್ಯರು ಒಮ್ಮತದಿಂದ ಕೂಡಿಕೊಂಡು ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ಮಾಡಬೇಕು ಎಂದರು.
ರಾಜು ದಾವಣಗೇರಿ ಮಾತನಾಡಿ, ಕಾರ್ಯಕರ್ತರ ಶ್ರಮದಿಂದಾಗಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಿದೆ. ಸರ್ಕಾರ ಜಾರಿಗೊಳಿಸಿದ ಮಹತ್ವದ ಯೋಜನೆಗಳು ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಿದೆ. ಸರ್ಕಾರ ನುಡಿದಂತೆ ನಡೆದಿದೆ ಎಂದರು.\
ಗ್ರಾ.ಪಂ. ಸದಸ್ಯರಾದ ರತ್ನವ್ವ ಕಾರಭಾರಿ, ಲಲಿತಾ ಪವಾರ, ಉಮೇಶ ರಾಠೋಡ, ಹನುಮಂತ ಕಡಕೋಳ, ಬಸಪ್ಪ ಮಾಯಣ್ಣವರ, ಲಕ್ಷ್ಮವ್ವ ಹಳ್ಳಿ, ವಸಂತ ಮಾಳಗಿಮನಿ, ಲಕ್ಷ್ಮವ್ವ ಕರಿ, ಹಿರಿಯರಾದ ಸೋಮಪ್ಪ ಕೊಡ್ಲಿ, ಚನ್ನಬಸವಗೌಡ ಪಾಟೀಲ, ಮಲ್ಲಪ್ಪ ರಾಜೂರು, ಪುಲಕೇಶಿಗೌಡ ಪಾಟೀಲ, ಸುರೇಶ ಮಾಳಗಿಮನಿ, ಮರಡೆಪ್ಪ ಹಳ್ಳಿ, ಹಾಲೇಶ ಹಳ್ಳಿ, ಶರಣಪ್ಪಗೌಡ ಪಾಟೀಲ, ಅಶೋಕ ಕಬ್ಬೇರಳ್ಳಿ, ಶರಣಪ್ಪ ಮಲ್ಲಾಪುರ, ಮಲ್ಲಪ್ಪ ತಳವಾರ, ಗುಡದಯ್ಯ ಯಳವತಿ, ಭೀಮೇಶಿ ಉಡಚಣ್ಣವರ, ಹನುಮಂತಪ್ಪ ಕೊಡ್ಲಿ, ಸಿದ್ದಪ್ಪ ಗಡಗಿ, ಲಕ್ಷ್ಮಣ ಬಾದಾಮಿ, ಚನ್ನಪ್ಪ ಹಳ್ಳಿ, ಭೀಮನಗೌಡ ಅಯ್ಯನಗೌಡ್ರ, ನಾಗರಾಜ ಬಾಲಾಪುರ, ಹನುಮಂತಪ್ಪ ಭೀಮನಗೌಡ, ಪ್ರಧಾನಿ ಕರಿ, ಮಲ್ಲಣ್ಣ ಕೊಡ್ಲಿ, ಇತರರು ಇದ್ದರು.