ಅತ್ಯಾಚಾರಿಗಳ ವಿರುದ್ದ ಶೋಭಾ ಗುಡುಗು ಪುರುಷತ್ವ ಹರಣ ಶಿಕ್ಷೆಯೇ ಸೂಕ್ತ ಎಂದ ಸಂಸದೆ

Shobakharandlaje
Published on

ಉಡುಪಿ: ಅತ್ಯಾಚಾರ ಆರೋಪಿಗಳಿಗೆ ಗಲ್ಲುಶಿಕ್ಷೆಗಿಂತಲೂ ಪುರುಷತ್ವ ಹರಣ ಶಿಕ್ಷೆ ಸೂಕ್ತ ಎಂದು ಸಂಸದೆ ಶೋಭಾ ಕರಂದ್ಲಾಜೆ ಗುಡುಗಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಹಲವೆಡೆ ಆಗಾಗ್ಗೆ ಅತ್ಯಾಚಾರ ಪ್ರಕರಣ ಮರುಕಳಿಸುತ್ತಿವೆ.

ಅತ್ಯಾಚಾರ ಪ್ರಕರಣಗಳಿಗೆ ಧರ್ಮ, ಜಾತಿಯ ಲೇಪನ ಬೇಡ, ಇದು ಮಾನಸಿಕ ಸ್ಥಿತಿ ಮೇಲೆ ಅವಲಂಬಿತವಾಗಿರುತ್ತದೆ. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ.

ನನ್ನ ಪ್ರಕಾರ ಗಲ್ಲು ಶಿಕ್ಷೆಗಿಂತಲೂ ಪುರುಷತ್ವ ಹರಣ ಶಿಕ್ಷೆಯೇ ಸೂಕ್ತವಾಗಿದ್ದು, ಈ ಬಗ್ಗೆ ಸೂಕ್ತ ಕಾನೂನು ತಿದ್ದುಪಡಿಗೊಳಿಸಲು ಕೇಂದ್ರ ಸರ್ಕಾರವನ್ನು ಆಗ್ರಹಿಸುವುದಾಗಿ ಶೋಭಾ ತಿಳಿಸಿದರು.

ಹಾಥರಾಸ್ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರಕ್ಕೆ ದುರುದ್ದೇಶಪೂರ್ವಕವಾಗಿ ಕೆಟ್ಟ ಹೆಸರು ತರಲು ಸಂಚು ಮಾಡಿರುವಂತಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಒಟ್ಟಾರೆ ಪ್ರಕರಣದ ಹಿಂದೆ ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳ ಕೈವಾಡ ಇದೆ ಎಂದು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net