ಶಿವಶಿ೦ಪಿಗರ ಸಂಘಟನೆಯ ಕಲೆ ಶ್ಲಾಘನೀಯ

9 Dwd 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಶಿವಶಿಂಪಿ ಸಮಾಜ ಬಾಂಧವರಲ್ಲಿರುವ ಭಯ, ಭಕ್ತಿ, ಶ್ರದ್ಧೆ, ಶಿಸ್ತು ಮೆಚ್ಚುವಂಥದ್ದು. ಶಿವಶಿಂಪಿಗರನ್ನು ನೋಡಿ ಸಂಘಟನೆಯ ಕಲೆ ಕಲಿಯಬೇಕು ಎಂದು ಉಪ್ಪಿನಬೆಟಗೇರಿಯ ಶ್ರೀ ಕುಮಾರ ವಿರೂಪಾಕ್ಷ ಮಹಾಸ್ವಾಮೀಜಿ ಹೇಳಿದರು.

ನಗರದ ಅಕ್ಕನ ಬಳಗದಲ್ಲಿ ಡಾ. ಡಿ.ಸಿ. ಪಾವಟೆ ವೇದಿಕೆಯಿಂದ ಇತ್ತೀಚೆಗೆ ಆಯೋಜಿಸಿದ್ದ ಕುಲಗುರು ಶ್ರೀ ಶಿವದಾಸಿಮಯ್ಯನವರ ಜಯಂತ್ಯುತ್ಸವ, ಹಿರಿಯ ನಾಗರಿಕರು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಪಾದೋದಕ, ಪ್ರಸಾದಗಳಿಗೆ ಹೆಸರಾದವರು ಶಿವಶಿಂಪಿಗರು. ಈ ಸಮಾಜದ ಉಳ್ಳವರು ಧನಸಹಾಯದ ಮೂಲಕ ಬಡವರನ್ನು ಮೇಲೆತ್ತಬೇಕು. ಸಮಾಜದ ಶಿಕ್ಷಣ ಸಂಸ್ಥೆಗಳು ರಾಜ್ಯಾದ್ಯಂತ ಸ್ಥಾಪಿತವಾದಾಗ ಇನ್ನಷ್ಟು ಅಭಿವೃದ್ಧಿ ಸಾಧ್ಯ ಎಂದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಸಮಾಜದ ಸಮುದಾನ ಭವನ ನಿರ್ಮಾಣಕ್ಕೆ ಧನಸಹಾಯ ನೀಡುತ್ತೇನೆ ಎಂದರು.

ಪ0ಚಲಿ0ಗಪ್ಪ ಖೋದಾನಪೂರ ಅಧ್ಯಕ್ಷತೆ ವಹಿಸಿದ್ದರು. ಶಂಕರ ಸಣಕಲ್, ಡಾ. ಮಹಾಂತೇಶ ಕುಬಸದ, ರೇವಣಸಿದ್ದಪ್ಪ ಕಲ್ಯಾಣಶೆಟ್ಟಿ, ಷಣ್ಮುಖಪ್ಪ ನಾಗಠಾಣ, ಈರಣ್ಣ ಮುದಕವಿ, ಗುರಪ್ಪ ಪಾವಟೆ, ಕಸ್ತೂರಿ ಮುದಕವಿ, ಡಾ. ಪ್ರಭಾಕರ ಶಿವಾನಂದ ಶಿವಶಿಂಪಿ, ಈರಣ್ಣ ಹುನಗುಂದ, ಶಂಕರ ಕಾಲದೀಪ, ಇತರರಿದ್ದರು.

ವಿಜಯಕುಮಾರ ಅಳಗುಂಡಗಿ ಪ್ರಾರ್ಥಿಸಿದರು. ಚನ್ನವೀರಪ್ಪ ಸಂಶಿ ನಿರೂಪಿಸಿದರು. ಪ್ರವೀಣ ಕಡಿಬಾಗಿಲ ವಂದಿಸಿದರು.

ಪ್ರತಿಭಾವAತ ವಿದ್ಯಾರ್ಥಿಗಳು, ಸಾಧಕರನ್ನು ಸನ್ಮಾನಿಸಲಾಯಿತು. ಬೆಳಗ್ಗೆ ಆಯೋಜಿಸಿದ್ದ 101 ಕುಂಭ ಮೆರವಣಿಗೆಗೆ ಮುರುಘಾಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮೀಜಿ ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net