ಶಿವಶರಣರ ಅಶಯಗಳು ಸಮಾಜಕ್ಕೆ ದಾರಿದೀಪ

6 kdr 2
ಮಲ್ಲೇಶ್ವರದಲ್ಲಿ ಏರ್ಪಡಿಸಿದ್ದ ಶ್ರಾವಣ ಸಂಜೆ ಶರಣರ ಸಂದೇಶ 24 ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಹಿರೇನಲ್ಲೂರು ಶಿವು ಅವರನ್ನು ಗೌರವಿಸಲಾಯಿತು. ಯಳನಡು ಮಠದ ಜ್ಞಾನಪ್ರಭು ಸಿದ್ದರಾಮ ದೇಶಿ ಕೇಂದ್ರ ಸ್ವಾಮೀಜಿ, ಬಸವ ಮರುಳಸಿದ್ದ ಸ್ವಾಮೀಜಿ, ರವೀಶ್ ಕ್ಯಾತನ ಬೀಡು, ಕೆ.ವಿರುಪಾಕ್ಷಪ್ಪ, ಹೊಸೂರು ಪುಟ್ಟರಾಜು ಮತ್ತಿತರಿದ್ದರು.
Published on

ಕಡೂರು: ಶಿವಶರಣರ ಅಶಯಗಳು ಪ್ರಸ್ತುತ ಸಮಾಜಕ್ಕೆ ದಾರಿ ದೀಪವಾಗಿವೆ ಎಂದು ಸಾಹಿತಿ ಹೊಸೂರು ಪುಟ್ಟರಾಜು ಹೇಳಿದರು.
ತಾಲೂಕಿನ ಮಲ್ಲೇಶ್ವರದ ಮಾರುತಿ ಬಡಾವಣೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್‌ನಿಂದ ಏರ್ಪಡಿಸಿದ್ದ ಶ್ರಾವಣ ಸಂಜೆ ಶರಣರ ಸಂದೇಶ-24 ಕಾರ್ಯಕ್ರಮ ಉದ್ಘಾಟಿಸಿ ಉಪನ್ಯಾಸ ನೀಡಿದರು.
ಪ್ರಸ್ತುತ ನಾವು ಭ್ರಮಾ ಲೋಕದಲ್ಲಿದ್ದೇವೆ. ಇಂದು ಈ ಕ್ಷಣ ಇರುವುದೆಲ್ಲವೂ ಶಾಶ್ವತವಾಗಿ ನಮ್ಮದು ಎಂದುಕೊಂಡಿದ್ದೇವೆ. ಆದರೆ ಅದು ಶಾಶ್ವತವಲ್ಲ. ನಾವು ಮಾಡಿದ ಸತ್ಕಾರ್ಯಗಳಿಂದ ಪಡೆದ ಪುಣ್ಯವಷ್ಟೆ ನಮ್ಮದು. ನಮ್ಮ ನಂತರವೂ ಜನಮನದಲ್ಲಿ ಉಳಿದುಕೊಳ್ಳಬೇಕಾದರೆ ಜೀವಿಸಿರುವಾಗಲೇ ಸತ್ಕಾರ್ಯ ನಿರತರಾಗಬೇಕು. ಶಿವಶರಣರೂ ಸಹ ತಮ್ಮ ವಚನಗಳಲ್ಲಿ ಈ ಜೀವನಾನುಭವದ ಸತ್ಯವನ್ನು ಹೇಳಿದ್ದಾರೆ. ಅವುಗಳನ್ನು ಸರಿಯಾಗಿ ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.
ಪರಿಷತ್ ತಾಲೂಕು ಅಧ್ಯಕ್ಷ ವಿರೂಪಾಕ್ಷಪ್ಪ ಮಾತನಾಡಿ, ಶ್ರಾವಣ ಮಾಸವಿಡೀ ನಿತ್ಯ ಒಂದೊಂದು ಮನೆಯಲ್ಲಿ ಶರಣ ಸಂದೇಶ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನ ಶರಣರ ವಿಚಾರಧಾರೆಗಳನ್ನು ಮೆಲುಕು ಹಾಕುವ ಹಾಗೂ ಸಾಹಿತ್ಯಿಕ, ಸಾಂಸ್ಕೃತಿಕ ವಿಚಾರಗಳ ಬಗ್ಗೆ ಚಿಂತಕರಿಂದ ಉಪನ್ಯಾಸ ಮಾಲಿಕೆ ನಡೆಯಲಿದೆ. ಜನರಲ್ಲಿ ಶರಣರ ಚಿಂತನೆಗಳ ಬಗ್ಗೆ ಆಸಕ್ತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕ್ಯಾತನಬೀಡು ರವೀಶ್‌ಬಸಪ್ಪ , ಬಸವ ತತ್ವ ಪೀಠದ ಬಸವ ಮರುಳಸಿದ್ದ ಸ್ವಾಮೀಜಿ ಹಾಗೂ ಯಳನಡು ಮಠದ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಪತ್ರಕರ್ತ ಹಿರೇನಲ್ಲೂರು ಶಿವು, ಕವಿ ಗುರುರಾಜ ಹಾಲ್ಮಠ್, ಮಲ್ಲೇಶ್ವರ ಗ್ರಾಪಂ ಅಧ್ಯಕ್ಷೆ ಯಶೋಧ ಧರ್ಮರಾಜು, ಸದಸ್ಯರಾದ ವಸಂತ ಕುಮಾರ್, ಎಂ.ಸಿ.ಮಾಲತೇಶ್, ಸಿ.ಎನ್.ಶೇಖರಪ್ಪ, ಎಸ್.ವಿ.ಪರಮೇಶ್ವರಪ್ಪ, ಪರಿಷತ್‌ನ ಗೌರವಾಧ್ಯಕ್ಷ ಎಂ.ರಂಗಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net