

ರೋಣ: ವಚನಗಳ ಮೂಲಕ ಸಮಾಜದ ಪರಿವರ್ತನೆಗೆ ಶ್ರಮಿಸಿದ ಶಿವಶರಣ ನುಲಿಯ ಚಂದಯ್ಯನವರು ಶ್ರೇಷ್ಠ ವಚನಕಾರರಾಗಿದ್ದಾರೆ ಎಂದು ಪುರಸಭೆ ಉಪಾಧ್ಯಕ್ಷ ಮಿಥುನ ಜಿ. ಪಾಟೀಲ ಹೇಳಿದರು.
ತಾಲೂಕಿನ ಸವಡಿ ಗ್ರಾಮದ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ಭಜಂತ್ರಿ ಸಮಾಜ ಸವಡಿ ಆಶ್ರಯಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾಯಕಯೋಗಿ ಶಿವಶರಣ ನುಲಿಯ ಚಂದಯ್ಯನವರ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಕಾಯಕನಿಷ್ಠ ಯೋಗಿ ಹಾಗೂ ನಿಜಾನುಭಾವಿ ಶರಣ ನುಲಿಯ ಚಂದಯ್ಯನವರು ವಚನಗಳ ಮೂಲಕ ಕಾಯಕದ ಮಹತ್ವ ಸಾರಿದರು. ಗುರು, ಲಿಂಗ, ಜಂಗಮ ತತ್ವವನ್ನು ಜಗತ್ತಿಗೆ ಪಸರಿಸಿ, ನುಡಿದಂತೆ ನಡೆದ ಶ್ರೇಷ್ಠ ವಚನಕಾರರಾಗಿದ್ದಾರೆ ಎಂದರು.
ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಚಂದಯ್ಯನವರ ಭಾವಚಿತ್ರ ಮೆರವಣಿಗೆ ನಡೆಯಿತು. ತರಕೇರಿ ಜಂದಿ ಕ್ಷೇತ್ರ ನುಲಿಯ ಚಂದಯ್ಯ ಗುರುಪೀಠ ಪೀಠಾಧ್ಯಕ್ಷ ಋಷಭೇಂದ್ರ ನುಲಿಯ ಚಂದೇಶ್ವರ ಸ್ವಾಮೀಜಿ, ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ, ಶಿವಪೂಜಾ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.
ಭಜಂತ್ರಿ ಸಮಾಜದ ತಾಲೂಕು ಅಧ್ಯಕ್ಷ ಬಾಳಪ್ಪ ಭಜಂತ್ರಿ, ಉಪಾಧ್ಯಕ್ಷ ದೊಡ್ಡಹನಮಪ್ಪ ಭಜಂತ್ರಿ, ಸಂಗನಬಸಯ್ಯ ಹಿರೇಮಠ, ಪಿಡಿಒ ಅನ್ನಪೂರ್ಣ ಪರಡ್ಡಿ, ಪುರಸಭೆ ಅಧ್ಯಕ್ಷೆ ರಂಗವ್ವ ಭಜಂತ್ರಿ, ಗ್ರಾಪಂ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಕಂಬಳಿ, ಬಸಮಗಮ ಭಜಂತ್ರಿ, ಕಂಬಣ್ಣ ಭಜಂತ್ರಿ, ರಾಜು ಭಜಂತ್ರಿ, ಹುಲ್ಲೇಶ ಭಜಂತ್ರಿ, ಬಸವರಾಜ ಭಜಂತ್ರಿ, ಎ. ರಾಜಕುಮಾರ, ಮಾರುತಿ ಭಜಂತ್ರಿ, ಶಂಕ್ರಪ್ಪ ಭಜಂತ್ರಿ, ದೇವರಾಜ ಭಜಂತ್ರಿ, ಮುತ್ತಣ್ಣ ಭಜಂತ್ರಿ, ಶ್ಯಾಮಸುಂದರ ಕೊರವರ, ವೀರೇಶ ಭಜಂತ್ರಿ, ಹನಮಪ್ಪ ಭಜಂತ್ರಿ, ರಾಘವೇಂದ್ರ ಭಜಂತ್ರಿ, ಸಂಗಪ್ಪ ಹುಣಸಿಮರದ, ರಂಗಪ್ಪ ಭಜಂತ್ರಿ, ಹನಮಂತಪ್ಪ ಭಜಂತ್ರಿ ಇತರರಿದ್ದರು.