

ವಿಜಯಪುರ:ಹರಳಯ್ಯನವರ ಶರಣ ಧರ್ಮದ ದಾರಿಯಲ್ಲಿ ಸಮಗಾರ ಸಮಾಜ ಕಾಯಕವೇ ಕೈಲಾಸ ಎಂದು ನಂಬಿ ತನ್ನ ಕಾಯಕದಲ್ಲಿ ತೊಡಗಿದೆ. ಸಮಾಜದವರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದು ರಾಜ್ಯ ದಲಿತ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರ ಸಂದ ಮಹಾದೇವ ಬಿಜಾಪುರ ಹೇಳಿದರು.ನಗರದ ಮುಳ್ಳಗಸಿ ಬಳಿಯ ಹರಳಯ್ಯ ಸಮಾಜದ ನೇತೃತ್ವದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹಾ ಶಿವಶರಣ ಸಮಗಾರ (ಚಮ್ಮಾರ) ಹರಳಯ್ಯನವರ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಯಕದಲ್ಲಿ ಕೈಲಾಸ ಕಂಡ ಸಮಗಾರ ಸಮಾಜ
ಪಾಲಿಕೆ ಮೇಯರ್ ಎಂ.ಎಸ್. ಕರಡಿ ಮಾತನಾಡಿ, ಸಮಗಾರ ಸಮಾಜದ ಹಿತಾಸಕ್ತಿಗಾಗಿ ಅಗತ್ಯವಿರುವ ಎಲ್ಲ ಸೌಲಭ್ಯ ದೊರಕಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.ರಾಜ್ಯ ಜೀವನ ಜ್ಯೋತಿ ದಲಿತ ಸೇವಾ ಸಂದ ವತಿಯಿಂದ ಪಾದರಕ್ಷೆಗಳನ್ನು ರಿಪೇರಿ ಮಾಡುವ ಕಾರ್ಮಿಕರಿಗೆ ಮೆಟಲ್ ಬೇಸ್ ವಿತರಿಸಲಾಯಿತು. ನಂತರ ಸಾಂಸತಿಕ ಕಾರ್ಯಕ್ರಮಗಳು ನಡೆದವು.
ರಾಜ್ಯ ದಲಿತ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರ ಸಂದ ಅಧ್ಯಕ್ಷ ಹನಮಂತ ಕದಂ, ಪಾಲಿಕೆ ಸದಸ್ಯ ಅಶೋಕ ನ್ಯಾಮಗೊಂಡ, ಮಾಜಿ ಸದಸ್ಯ ಪರಶುರಾಮ ರಜಪೂತ, ಸಮಾಜದ ಪ್ರಮುಖರಾದ ವಿಠಲ ಸೂರ್ಯವಂಶಿ, ಯಲ್ಲಪ್ಪ ಮಂಟೂರ, ತಿಪ್ಪಣ್ಣ ಶಹಾಪುರ, ಶಿವಾಜಿ ಸಪ್ತಾಳಕರ, ಅರ್ಜುನ ಕಾಂಬಳೆ, ಲಕ್ಷ$್ಮಣ ಕುಂದರಗಿ, ಬಸವರಾಜ ಕಾಂಬಳೆ, ಪ್ರವಿಣ ಇಳಕಲ್ಲ, ರವಿ ಶಹಾಪುರ, ಚನ್ನಪ್ಪ ಸಪ್ತಾಳಕರ, ಶಿವಪ್ಪ ಶಾಪುರ, ಜಗದೀಶ ಕಬಾಡೆ ಮತ್ತಿತರರಿದ್ದರು.
ಪರಶುರಾಮ ವಿಜಾಪುರ ಪ್ರಾರ್ಥಿಸಿದರು. ರವೀಂದ್ರ ಮಾನೆ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಶರಣ ಹರಳಯ್ಯನವರ ಭಾವಚಿತ್ರದ ಮೆರವಣಿಗೆ ನಡೆಯಿತು.
ವಿಜಯಪುರದ ಮುಳ್ಳಗಸಿ ಬಳಿಯ ಹರಳಯ್ಯ ಸಮಾಜದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಮಹಾ ಶಿವಶರಣ ಸಮಗಾರ (ಚಮ್ಮಾರ) ಹರಳಯ್ಯನವರ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಸಮಾಜದ ಪ್ರಮುಖರನ್ನು ಸನ್ಮಾನಿಸಲಾಯಿತು. ಎಂ.ಎಸ್. ಕರಡಿ. ಪರಶುರಾಮ ರಜಪೂತ, ಮಹಾದೇವ ಬಿಜಾಪುರ ಮತ್ತಿತರರಿದ್ದಾರೆ.