ಶೃಂಗೇರಿ ಜಗದ್ಗುರುಗಳಿಂದ ಶಿವಶಕ್ತಿಧಾಮ ಲೋಕಾರ್ಪಣೆ, ಹುಬ್ಬಳ್ಳಿಯ ಪಾಲಿಕೊಪ್ಪದಲ್ಲಿ ನೂತನ ದೇವಾಲಯ

IMG-20240222-WA0009.jpg
Published on

ಹುಬ್ಬಳ್ಳಿ: ವಿಆರ್ ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರ ಬಹುದಿನಗಳ ಸಂಕಲ್ಪ ಸಾಕಾರಗೊಂಡಿದ್ದು, ಶ್ರೀ ಶಿವಶಕ್ತಿ ಧಾಮದ ಲೋಕಾರ್ಪಣೆಯು ಗುರುವಾರ ವಿಧ್ಯುಕ್ತವಾಗಿ ನೆರವೇರಿತು. ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಶಿವಶಕ್ತಿಧಾಮವನ್ನು ಉದ್ಘಾಟಿಸಿದರು.

ಹಿಂದು ಸಂಸತಿಯ ಪ್ರಚಾರ ಮತ್ತು ಐಕ್ಯತೆ ದೃಷ್ಟಿಯಿಂದ ಹುಬ್ಬಳ್ಳಿ ಸಮೀಪದ ಪಾಲಿಕೊಪ್ಪದಲ್ಲಿ ನಿಮಿರ್ಸಲಾಗಿರುವ ದೇವಾಲಯಗಳ ಸಮುಚ್ಛಯಕ್ಕೆ "ಶ್ರೀಶಿವಶಕ್ತಿ ಧಾಮ' ಎಂದು ನಾಮಕರಣ ಮಾಡಿದ ಶೃಂಗೇರಿ ಜಗದ್ಗುರುಗಳು, ಈ ಕ್ಷೇತ್ರದಲ್ಲಿ ಪ್ರತಿಷ್ಠಾಪನೆಗೊಂಡಿರುವ ಶಿವಲಿಂಗಕ್ಕೆ "ಆನಂದೇಶ್ವರ', ಚಂಡಿಕೇಶ್ವರಿ ಮಾತೆಗೆ "ಜ್ಞಾನಾಂಬಿಕೆ', ವಿನಾಯಕನಿಗೆ "ವಿಜಯ ಗಣಪತಿ' ಎಂದು ನಾಮಕರಣ ಮಾಡಿದ್ದಾರೆ.

ಜತೆಗೆ ಆದಿತ್ಯಾದಿ ನವಗ್ರಹಗಳು, ಶನೈಶ್ಚರ ಸ್ವಾಮಿ ಮತ್ತು ಕ್ಷೇತ್ರಪಾಲಕ ಕಾಲಭೈರವೇಶ್ವರನ ಮೂತಿರ್ಗಳನ್ನು ಮಾ ಶುದ್ಧ ತ್ರಯೋದಶಿಯ ರಾಜಯೋಗದ ಸುಮುಹೂರ್ತದಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡಿ, ಸ್ವತಃ ಜಗದ್ಗುರುಗಳು ಕುಂಬಾಭಿಷೇಕ ಸಹಿತ ಬ್ರಹ್ಮಕಳಸಾರೋಹಣ ಮಾಡಿದರು.

ಬುಧವಾರ ಸಂಜೆಯೇ ಪಾಲಿಕೊಪ್ಪ ಕ್ಷೇತ್ರಕ್ಕೆ ಆಗಮಿಸಿದ ಶೃಂಗೇರಿ ಜಗದ್ಗುರುಗಳನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು.

ದೇವಾಲಯದ ಪೂರ್ಣ ಪರಿಸರವನ್ನು ನೋಡಿದ ಶ್ರೀಗಳು ಇದೊಂದು ದೊಡ್ಡ ಕ್ಷೇತ್ರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು. ಶೃಂಗೇರಿ ಪೀಠದ 100ಕ್ಕೂ ಹೆಚ್ಚು ಋತ್ವಿಜರ ತಂಡವು ಕಳೆದೆರಡು ದಿನಗಳಿಂದ ಧಾಮಿರ್ಕ ಕಾರ್ಯಕ್ರಮದ ವೈದಿಕತ್ವವನ್ನು ವಹಿಸಿ, ಸ್ಥಲಶುದ್ಧಿ, ನಾಂದಿಪೂಜೆಯಿಂದ ಆರಂಭಿಸಿ ವಿವಿಧ ಹೋಮ&ಹವನ ಹಾಗೂ ಗುರುಪಾದುಕಾ ಪೂಜೆಯೊಂದಿಗೆ ಅಷ್ಟಬಂಧ ಪ್ರಾಣಪ್ರತಿಷ್ಠಾಪನೆಯನ್ನು ನೆರವೇರಿಸಿತು.

ಗುರುವಾರ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಆರಂಭವಾದ ಧಾಮಿರ್ಕ ವಿಧಿವಿಧಾನಗಳು ಅಂತಿಮವಾಗಿ ಜಗದ್ಗುರುಗಳ ಅಮೃತ ಹಸ್ತದಿಂದ ಬ್ರಹ್ಮಕಲಶತೀರ್ಥದ ಅಭಿಷೇಕ ಹಾಗೂ ಮಹಾಪೂಜೆಯೊಂದಿಗೆ ಸಂಪನ್ನಗೊಂಡವು. ಬೃಹತ್ ಗರ್ಭಗೋಪುರ ಮತ್ತು ರಾಜಗೋಪುರದ ಮೇಲೆ ಪ್ರತಿಷ್ಠಾಪಿಸಲಾಗಿರುವ ಪಂಚಕಲಶಗಳಿಗೆ ಸ್ವತಃ ಜಗದ್ಗುರುಗಳು ಅಭಿಷೇಕ ಮಾಡಿ ಪೂಜೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ವಿಆರ್ ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಶ್ರೀಮತಿ ಲಲಿತಾ ವಿಜಯ ಸಂಕೇಶ್ವರ, ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ, ಶ್ರೀಮತಿ ವಾಣಿ ಆನಂದ ಸಂಕೇಶ್ವರ, ವಿಜಯಾನಂದ ಟ್ರಾವೆಲ್ಸ್ ಎಂ.ಡಿ. ಶಿವಾ ಸಂಕೇಶ್ವರ ಹಾಗೂ ಸಂಕೇಶ್ವರ ಕುಟುಂಬದ ಎಲ್ಲ ಸದಸ್ಯರು, ಬಂಧುಗಳು ಉಪಸ್ಥಿತರಿದ್ದರು.

ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಬಿಜೆಪಿ ವಕ್ತರರಾದ ಹರಿಪ್ರಕಾಶ ಕೋಣೇಮನೆ, ಶೃಂಗೇರಿ ಪೀಠದ ಆಡಳಿತಾಧಿಕಾರಿ ಪಿ.ಎ. ಮುರುಳಿ, ಆಡಳಿತ ಸಲಹೆಗಾರರಾದ ಡಾ. ಗೌರಿಶಂಕರ್ ಮತ್ತಿತರ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಹುಬ್ಬಳ್ಳಿ&ಧಾರವಾಡ ಸೇರಿದಂತೆ ಹಲವು ಕಡೆಗಳ ಲಕ್ಷಾಂತರ ಜನರಿಂದ ದೇವಾಲಯದ ಪ್ರಾರಂಭೋತ್ಸವಕ್ಕೆ ಆಗಮಿಸಬೇಕೆಂಬ ಅಪೇಕ್ಷೆ ವ್ಯಕ್ತವಾದರೂ, ಧಾಮಿರ್ಕ ಕಾರ್ಯಕ್ರಮದ ರೀತಿ&ನೀತಿ, ಪದ್ಧತಿಗಳಿಗೆ ಯಾವುದೇ ಅಡಚಣೆಯುಂಟಾಗಬಾರದೆಂಬ ಕಾರಣಕ್ಕೆ ಸಾರ್ವಜನಿಕರಿಗೆ ಆಹ್ವಾನ ನೀಡಿರಲಿಲ್ಲ.

  • ವಿಜಯ ಸಂಕೇಶ್ವರರ ಧರ್ಮಶ್ರದ್ಧೆ ಎಲ್ಲರಿಗೂ ಮಾದರಿ:
    ಶಿವಶಕ್ತಿ ಧಾಮದ ಕರ್ತೃಗಳಾದ ಡಾ. ವಿಜಯ ಸಂಕೇಶ್ವರ ಅವರಿಗಿರುವ ಧರ್ಮಶ್ರದ್ಧೆ ಇತರರಿಗೆ ಮಾದರಿ ಎಂದು ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
  • ಧಾರ್ಮಿಕ ವಿಧಿಗಳನ್ನು ಪೂರೈಸಿದ ನಂತರ ನಡೆದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮನುಷ್ಯ ದೊಡ್ಡ ಸ್ಥಾನಕ್ಕೆ ತಲುಪಿದ ನಂತರ ತಾನು ಬೆಳೆದು ಬಂದ ಹಾದಿಯನ್ನು ಮರೆಯುತ್ತಾನೆ. ಜತೆಗೆ ಧರ್ಮ, ಸಂಸ್ಕಾರವನ್ನು ಮರೆಯುತ್ತಾನೆ. ಆದರೆ, ಉದ್ಯಮಿಗಳಾದ ಡಾ. ವಿಜಯ ಸಂಕೇಶ್ವರ ಅವರು ಇಡೀ ದೇಶವೇ ಗುರುತಿಸುವ ಮಟ್ಟಿಗೆ ಸಾಧನೆ ಮಾಡಿದರೂ ಸನಾತನ ಧರ್ಮದ ಮೇಲಿನ ಶ್ರದ್ಧೆಯನ್ನು ಮರೆತಿಲ್ಲ. ಮಾತ್ರವಲ್ಲ, ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಕೂಡಾ ಅದೇ ಸಂಸ್ಕಾರವನ್ನು ನೀಡಿದ್ದಾರೆ. ವಿಜಯ ಸಂಕೇಶ್ವರರ ಸಂಕಲ್ಪದಂತೆ ಶಿವಶಕ್ತಿ ಧಾಮವನ್ನು ಸನಾತನ ಧರ್ಮದ ಕೇಂದ್ರವಾಗಿ ಬೆಳೆಸಲಾಗುವುದು ಎಂದು ನುಡಿದರು.

ಹಿಂದುಗಳ ಐಕ್ಯತೆಗೆ ಅಂತರ್ಜಾತಿ ವಿವಾಹ ಅವಶ್ಯ
ಹಿಂದುಗಳಲ್ಲಿರುವ ಮೇಲು&ಕೀಳು ಭಾವನೆ ನಿವಾರಣೆಯಾಗಿ ಹಿಂದುಗಳು ಒಗ್ಗಟ್ಟಾಗಲು ಅಂತರ್ಜಾತಿ ವಿವಾಹ ಅವಶ್ಯವೆಂದು ಡಾ. ವಿಜಯ ಸಂಕೇಶ್ವರ ಪ್ರತಿಪಾದಿಸಿದ್ದಾರೆ.
ಪಾಲಿಕೊಪ್ಪದಲ್ಲಿ ನೂತನವಾಗಿ ನಿಮಿರ್ಸಿರುವ ಶಿವಶಕ್ತಿ ಧಾಮದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದು ಧರ್ಮದ ಒಗ್ಗಟ್ಟು ಮತ್ತು ಸಂಟನೆಗೆ ಸಂಬಂಧಪಟ್ಟಂತೆ ಅನೇಕ ಮಹಾತ್ಮರು ಬಹಳ ಹಿಂದಿನಿಂದಲೂ ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಆದರೆ, ಈವರೆಗೆ ಅದು ಪೂರ್ಣ ಪ್ರಮಾಣದಲ್ಲಿ ಫಲ ನೀಡಿಲ್ಲ. ಹಿಂದುಗಳಲ್ಲಿರುವ ಜಾತಿ ಭೇದ, ಅಸ್ಪಶ್ಯತೆ, ತಾರತಮ್ಯಗಳಿಂದ ಹಿಂದುಗಳು ಒಂದಾಗಲು ಸಾಧ್ಯವಾಗಿಲ್ಲ. ಹಿಂದುಗಳಲ್ಲಿ ಸಮಗ್ರತೆ, ಸಮಷ್ಠಿಪ್ರೆ ಜಾಗೃತವಾಗಬೇಕು. ಅಂತರ್ಜಾತಿ ವಿವಾಹದಿಂದ ಪರಸ್ಪರ ಪ್ರೀತಿ, ಬಾಂಧವ್ಯ ಮೂಡುತ್ತದೆ. ಇದರಿಂದ ಹಿಂದು ಸಮಾಜ ಬಲಿಷ್ಠವಾಗಲು ಸಾಧ್ಯ ಎಂದು ಅವರು ವಿವರಿಸಿದರು.

ಕಳೆದ 10 ವರ್ಷಗಳ ಹಿಂದೆ ರಾಮನ ಹೆಸರು ಹೇಳುವುದಾಗಲೀ, ರಾಮನ ಮಂದಿರ ನಿರ್ಮಾಣ ಮಾಡುವುದಾಗಲೀ ಅಥವಾ ನಾನೊಬ್ಬ ಹಿಂದು ಎಂದು ಹೇಳಿಕೊಳ್ಳುವುದಕ್ಕೂ ಪೂರಕವಾದ ಪರಿಸ್ಥಿತಿ ಇರಲಿಲ್ಲ. ಆದರೆ, ಇಂದು ಜಗತ್ತಿನ ಎಲ್ಲಿ ಬೇಕಾದರೂ ನಾನೊಬ್ಬ ಹಿಂದು ಎಂಬುದನ್ನು ಹೆಮ್ಮೆಯಿಂದ ಹೇಳಬಹುದು. ಇಂತಹ ಪರಿಸ್ಥಿತಿಯನ್ನು ನಿಮಿರ್ಸಿಕೊಟ್ಟ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲಬೇಕು ಎಂದರು.

ಶೃಂಗೇರಿ ಮಠಕ್ಕೆ ಹಸ್ತಾಂತರ
ಶಿವಶಕ್ತಿ ಧಾಮವನ್ನು ಆರಾಧನಾ ಟ್ರಸ್ಟ್ನೊಂದಿಗೆ ಇಂದಿನಿಂದ ಜಗತಸಿದ್ಧ ಶೃಂಗೇರಿ ಶಾರದಾ ಪೀಠದ ಸುಪದಿರ್ಗೆ ಹಸ್ತಾಂತರ ಮಾಡುತ್ತಿದ್ದೇವೆ ಎಂದು ಡಾ. ವಿಜಯ ಸಂಕೇಶ್ವರ ಅವರು ಘೋಷಣೆ ಮಾಡಿದರು.
ಆರಾಧನಾ ಟ್ರಸ್ಟ್ ಆಡಳಿತ ಮಂಡಳಿಯ ಸದಸ್ಯರು, ನಮ್ಮ ಎಲ್ಲ ಸಂಬಂಧಿಕರು ಮನಃಪೂರ್ವಕವಾಗಿ ಶೃಂಗೇರಿ ಮಠಕ್ಕೆ ಈ ತೀರ್ಥ ಕ್ಷೇತ್ರವನ್ನು ಹಸ್ತಾಂತರ ಮಾಡಲು ಒಪ್ಪಿದ್ದೇವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net