ಶಿವರುದ್ರಪ್ಪ ಅಧ್ಯಕ್ಷ, ಶಿವಪುತ್ರಪ್ಪ ಉಪಾಧ್ಯಕ್ಷ

web2
ಹುಣಶೀಕಟ್ಟಿ ಹಾಲು ಉತ್ಪಾದಕರ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಶಿವರುದ್ರಪ್ಪ ಹೊಸಮನಿ ಹಾಗೂ ಉಪಾಧ್ಯಕ್ಷ ಶಿವಪುತ್ರಪ್ಪ ನಾಡಗೌಡ ಅವರನ್ನು ಸನ್ಮಾನಿಸಲಾಯಿತು. ಚನಬಸಪ್ಪ ಮೋಖಾಶಿ, ಉಮಾಪತಿ ಹಿರೇಮಠ, ಬಸಪ್ಪ ಕಳ್ಳಿ ಇತರರಿದ್ದರು.
Published on

ಎಂ.ಕೆ.ಹುಬ್ಬಳ್ಳಿ: ಸಮೀಪದ ಹುಣಶೀಕಟ್ಟಿ ಗ್ರಾಮದ ಹುಣಶೀಕಟ್ಟಿ ಹಾಲು ಉತ್ಪಾದಕರ ಸಹಕಾರಿ ಸಂಘದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಶಿವರುದ್ರಪ್ಪ ಕಲ್ಲಪ್ಪ ಹೊಸಮನಿ ಹಾಗೂ ಉಪಾಧ್ಯಕ್ಷರಾಗಿ ಶಿವಪುತ್ರಪ್ಪ ಮಹಾರುದ್ರಪ್ಪ ನಾಡಗೌಡ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಕಚೇರಿಯಲ್ಲಿ ಗುರುವಾರ ಜರುಗಿದ ಚುನಾವಣೆಯಲ್ಲಿ ಒಮ್ಮತದ ಮೇರೆಗೆ ಅವಿರೋಧ ಆಯ್ಕೆ ಜರುಗಿತು. ಚುನಾವಣಾಧಿಕಾರಿಗಳಾಗಿ ಬಸವರಾಜ ಹಡಪದ, ಕಾರ್ಯದರ್ಶಿ ರುದ್ರಪ್ಪ ಸದೆಪ್ಪ ಇಂಚಲ ಕಾರ್ಯನಿರ್ವಹಿಸಿದರು.

ಸಂಘದ ನೂತನ ನಿರ್ದೇಶಕರಾದ ಉಮಾಪತಿ ಹಿರೇಮಠ, ಬಸಪ್ಪ ಕಳ್ಳಿ, ಸಿದ್ದಪ್ಪ ಬಂಡಗಿ, ಸೋಮಪ್ಪ ಕೌಜಲಗಿ, ಪ್ರಕಾಶ ತೋಟಗಿ, ಮಡಿವಾಳಿ ಗುಡಿಸಲ, ನಿಂಬೆವ್ವ ಪಾಗಾದ (ಗುಡಿ), ರುದ್ರವ್ವ ಅಗಸಿಮನಿ (ಹಟ್ಟಿಹೊಳಿ), ಮಂಜುನಾಥ ಮೊಕಾಶಿ, ಶಿಮಾನ್ಯಪ್ಪ ತಳವಾರ ಹಾಗೂ ಬಿಜೆಪಿ ಹಿರಿಯ ಮುಖಂಡ ಚನಬಸಪ್ಪ ಮೋಖಾಶಿ, ಗ್ರಾಪಂ ಮಾಜಿ ಅಧ್ಯಕ್ಷ ಚನಬಸಪ್ಪ ಹುಬ್ಬಳ್ಳಿ, ಗ್ರಾಪಂ ಸದಸ್ಯ ಮಹಾಂತೇಶ ಅಂಗಡಿ, ಪಿಕೆಪಿಎಸ್ ಉಪಾಧ್ಯಕ್ಷ ಮಹಾರುದ್ರಪ್ಪ ಜಿರಲಿ, ಕಲ್ಲಯ್ಯ ಉಪ್ಪಿನ, ಚನ್ನಯ್ಯ ಉಪ್ಪಿನ, ಶಂಕರೆಪ್ಪ ಹುಬ್ಬಳ್ಳಿ, ಕೀರಪ್ಪ ಕೌಜಲಗಿ ಇತರರು ಇದ್ದರು.

ಕಳೆದ ನ.26ರಂದು ಹುಣಶೀಕಟ್ಟಿ ಹಾಲು ಉತ್ಪಾದಕರ ಸಹಕಾರಿ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಜಿಪಂ ಮಾಜಿ ಉಪಾಧ್ಯಕ್ಷ ಚನಬಸಪ್ಪ ಮೋಖಾಶಿ ನೇತತ್ವದ ಪ್ಯಾನಲ್‌ನಲ್ಲಿ ಸ್ಪರ್ಧಿಸಿದ್ದ ಎಲ್ಲ 12 ಸ್ಪರ್ಧಿಗಳು ಅಧಿಕ ಮತ ಪಡೆದು ಗೆಲುವು ಸಾಧಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net