ಬಿಲ್ವಪತ್ರೆಗಿದೆ ವಿಶೇಷ ಸ್ಥಾನ; ಎಸ್.ಸುರೇಶ್

19kdligi2
Published on



ಕೂಡ್ಲಿಗಿ: ಶಿವರಾತ್ರಿ ಅಂಗವಾಗಿ ಪಟ್ಟಣದ ಲಕ್ಷ್ಮೀ ನರಸಿಂಹ ದೇವಸ್ಥಾನದ ಬಳಿ ಶನಿವಾರ ರಾತ್ರಿ ಅಗಸಗಟ್ಟಿ ತಿಂದಪ್ಪ ಸಂಗಡಿಗರಿಂದ ಭಾವಗೀತೆ ಹಾಗೂ ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ ಜರುಗಿತು.

ವಾಲ್ಮೀಕಿ ಮಹಾಸಭಾದ ತಾಲೂಕು ಅಧ್ಯಕ್ಷ ಎಸ್.ಸುರೇಶ್ ಮಾತನಾಡಿ, ಹಿಂದು ಸಂಸ್ಕೃತಿಯಲ್ಲಿ ಹಬ್ಬಗಳಿಗೆ ವಿಶೇಷ ಮಾನ್ಯತೆ ಇದೆ. ಬಿಲ್ವಪತ್ರೆಯನ್ನು ಶಿವರಾತ್ರಿಯ ದಿನದಂದು ಪಂಚಾಕ್ಷರಿ ಜಪದೊಂದಿಗೆ ಶಿವನಿಗೆ ಸಮರ್ಪಿಸಿದರೆ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಹಾಗಾಗಿ ಬಿಲ್ವಪತ್ರೆಗೆ ವಿಶೇಷ ಸ್ಥಾನ ನೀಡಲಾಗಿದೆ ಎಂದರು. ಅಹೋರಾತ್ರಿ ಶಿವ ಭಜನೆ ಹಾಗೂ ಭಕ್ತಿ ಗೀತೆ ಗಾಯನ ನಡೆಯಿತು. ಲಕ್ಷ್ಮೀ ನರಸಿಂಹ ಸ್ವಾಮಿ ಯುವಕರ ಬಳಗದಿಂದ ಗಣ್ಯರಿಗೆ ಸನ್ಮಾನ ಮಾಡಲಾಯಿತು. ಜನರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net