ಕಾರ್ನಾಡು ಕ್ಷೇತ್ರದಲ್ಲಿ ಶಿವರಾತ್ರಿ ಜಾಗರಣ ಭಜನೆ

New Project (5)
Published on

ಮೂಲ್ಕಿ: ಮೂಲ್ಕಿ ಕಾರ್ನಾಡು ಶ್ರೀ ಹರಿಹರ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಉತ್ಸವ ನಡೆಯಿತು.

ಈ ಸಂದರ್ಭ ವಿಶೇಷ ಪ್ರಾರ್ಥನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಸಂಜೆ ಶ್ರೀ ಹರಿಹರ ಕ್ಷೇತ್ರ ಯುವಕ ವೃಂದ ಹಾಗೂ ಮಹಿಳಾ ಮಂಡಳಿ ನೇತೃತ್ವದಲ್ಲಿ ಜಾಗರಣ ಭಜನಾ ಕಾರ್ಯಕ್ರಮಕ್ಕೆ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ.ಎಚ್.ಅರವಿಂದ ಪೂಂಜ ಚಾಲನೆ ನೀಡಿದರು.

ದ.ಕ. ಮ್ಯೂಚುವಲ್ ಬೆನಿಫಿಟ್ ನಿಧಿ ಸುರತ್ಕಲ್ ಬ್ರಾಂಚ್‌ನ ಮುಖ್ಯ ಪ್ರಬಂಧಕ ಪ್ರಜ್ವಲ್ ಶೆಟ್ಟಿ, ಶರತ್ ಎನ್.ಸಾಲ್ಯಾನ್ ಕಾರ್ನಾಡ್, ಸುವರ್ಣಿ ಸುಜಿತ್ ನಾಯಕ್, ಯುವಕ ವೃಂದದ ಅಧ್ಯಕ್ಷ ಹರ್ಷರಾಜ ಶೆಟ್ಟಿ ಜಿ.ಎಂ., ಕಾರ್ಯದರ್ಶಿ ವಸಂತ ಕೋಟ್ಯಾನ್, ಕೋಶಾಧಿಕಾರಿ ಶಂಕರ್, ಉಪಾಧ್ಯಕ್ಷ ದಯಾನಂದ ಕೋಟ್ಯಾನ್, ಹರೀಶ್ ಸುವರ್ಣ, ಸುರೇಶ್ ರಾವ್, ಪ್ರವೀಣ್ ಕೋಟ್ಯಾನ್, ಕಿಶೋರ್ ಹರಿಹರ, ದೀಪಕ್ ಪಡುಬೈಲ್, ಮಹಿಳಾ ಮಂಡಳಿ ಅಧ್ಯಕ್ಷೆ ಉಷಾ ಶೇಖರ್, ಕಾರ್ಯದರ್ಶಿ ಗೀತಾ ಎಚ್.ಸಾಲ್ಯಾನ್, ಕೋಶಾಧಿಕಾರಿ ಕಸ್ತೂರಿ ದೇವಾಡಿಗ, ರೇವತಿ ಎನ್.ಪೂಜಾರಿ, ಉಷಾ ನಾರಾಯಣ್, ಶೋಭಾ ಸುರೇಶ್ ರಾವ್, ಮೂಲ್ಕಿ ನ.ಪಂ. ಸದಸ್ಯೆ ರಾಧಿಕಾ ಯಾದವ ಕೋಟ್ಯಾನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net