ಆತ್ಮಲಿಂಗೇಶ್ವರ ಕ್ಷೇತ್ರದಲ್ಲಿ ಮಾ.6 ರಿಂದ 11ರವರೆಗೆ ಶಿವರಾತ್ರಿ ಸಂಭ್ರಮ: ಭಾರತೀ ಎಜುಕೇಷನ್ ಟ್ರಸ್ಟ್ ಕಾರ್ಯಾಧ್ಯಕ್ಷ ಬಸವರಾಜು ಮಾಹಿತಿ

Shivratri celebration at Atmalingeshwar temple mandya
Published on

ಮಂಡ್ಯ: ಮದ್ದೂರು ತಾಲೂಕು ಹನುಮಂತನಗರದ ಆತ್ಮಲಿಂಗೇಶ್ವರ ಕ್ಷೇತ್ರದಲ್ಲಿ ಮಾ.6 ರಿಂದ 11ರವರೆಗೆ 32ನೇ ವರ್ಷದ ಭಾರೀ ದನಗಳ ಜಾತ್ರೆ, ಶಿವರಾತ್ರಿ ಉತ್ಸವ ಸೇರಿದಂತೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಭಾರತೀ ಎಜುಕೇಷನ್ ಟ್ರಸ್ಟ್ ಕಾರ್ಯಾಧ್ಯಕ್ಷ ಬಸವರಾಜು ಹೇಳಿದರು.

6ರಂದು ಬೆಳಗ್ಗೆ 6.45ಕ್ಕೆ ಧ್ವಜಾರೋಹಣ, 12ಗಂಟೆಗೆ ಮಹಾಮಂಗಳಾರತಿ, ಸಂಜೆ 5.30ರಿಂದ ಧಾರ್ಮಿಕ ಪೂಜಾ ಕೈಂಕರ್ಯ, ರಾತ್ರಿ 8ಗಂಟೆಗೆ ಮಹಾಮಂಗಳಾರತಿ, 7ರಂದು ಬೆಳಗ್ಗೆ 7ಗಂಟೆಗೆ ನಿತ್ಯಪೂಜೆ, ರಾತ್ರಿ 8ಗಂಟೆಗೆ ಮಹಾಮಂಗಳಾರತಿ, 8ರಂದು ಬೆಳಗ್ಗೆ 7ಗಂಟೆಗೆ ಮಹಾಗಣಪತಿ ಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮ, 10ಗಂಟೆಗೆ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ, ಸಂಜೆ 4ಗಂಟೆಯಿಂದ ವಾದ್ಯಗೋಷ್ಠಿ, ಸೋಬಾನೆ ಪದ, ಪ್ರವಚನ, ಭರತನಾಟ್ಯ, ಸಾಂಸ್ಕೃತಿಕ ಕಾರ್ಯಕ್ರಮ, ಡೊಳ್ಳುಕುಣಿತ, ದೊಣ್ಣೆ ವರಸೆ, ಕೋಲಾಟ ಮತ್ತು ಅಖಂಡ ಭಜನೆ, ಭಕ್ತಿ ಪ್ರಧಾನ ಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

9ರಂದು ಬೆಳಗ್ಗೆ 7.30ಕ್ಕೆ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ, ರಾತ್ರಿ 8ಗಂಟೆಗೆ ಪೂಜಾಭಿಷೇಕ ಮತ್ತು ವಿಶೇಷ ಪೂಜಾಲಂಕಾರ, ಮಹಾಮಂಗಳಾರತಿ, 10ರಂದು ಬೆಳಗ್ಗೆ 6ಗಂಟೆಯಿಂದ 8ರವರೆಗೆ ವಿಶೇಷ ಪೂಜೆ, ಮಧ್ಯಾಹ್ನ 2.15ಕ್ಕೆ ರಥೋತ್ಸವ ನಡೆಯಲಿದೆ. ಈ ವೇಳೆ ವಿವಿಧ ಗ್ರಾಮದ ಕಲಾತಂಡ ಪಾಲ್ಗೊಳ್ಳಲಿವೆ. ಸಂಜೆ 4.30ಕ್ಕೆ ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ, ರಾತ್ರಿ 8ಗಂಟೆಗೆ ಮಹಾಮಂಗಳಾರತಿ, 11ಗಂಟೆಗೆ ಸಂಜೆ 6.50ರಿಂದ 8ರವರೆಗೆ ಪಾವನಗಂಗಾದಲ್ಲಿ ‘ತೆಪ್ಪೋತ್ಸವ’ ಹಾಗೂ ರಾತ್ರಿ 8.15ಕ್ಕೆ ದೇವಾಲಯದ ಆವರಣದಲ್ಲಿ ಶಯನೋತ್ಸವ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಟ್ರಸ್ಟ್‌ನ ಕಾರ್ಯದರ್ಶಿ ಸಿದ್ದೇಗೌಡ, ಖಜಾಂಚಿ ಕೆ.ಎಸ್.ಗೌಡ, ಕನ್ನಡ ಉಪನ್ಯಾಸಕ ಶಿವಲಿಂಗೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net