145 ಕೆಜಿ ಜೋಳದ ಚೀಲ ಎತ್ತಿದ ಶಿವರಾಜ

Shivraj lifted a bag of 145 kg of corn
ತಾಳಿಕೋಟೆ ತಾಲೂಕಿನ ಪೀರಾಪುರ ಗ್ರಾಮದಲ್ಲಿ ಶ್ರೀ ಸಂಗಮೇಶ್ವರ ಜಾತ್ರೋತ್ಸವ ಅಂಗವಾಗಿ ನಡೆದ ಭಾರ ಎತ್ತುವ ಸ್ಪರ್ಧೆಯಲ್ಲಿ ಶಿವರಾಜ ಗುಂಡಕನಾಳ 145 ಕೆಜಿ ತೂಕದ ಜೋಳದ ಚೀಲ ಎತ್ತುವ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡರು.
Published on

ತಾಳಿಕೋಟೆ: ತಾಲೂಕಿನ ಪೀರಾಪುರ ಗ್ರಾಮದ ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ರೀತಿಯ ಭಾರ ಎತ್ತುವ ಸ್ಪರ್ದೆಯಲ್ಲಿ 145 ಕೆಜಿ ತೂಕದ ಜೋಳದ ಚೀಲವನ್ನು ಶಿವರಾಜ ಗುಂಡಕನಾಳ ಎತ್ತುವುದರೊಂದಿಗೆ ಪ್ರಥಮ ಸ್ಥಾನ ಪಡೆದು ಮೆಚ್ಚುಗೆ ಗಳಿಸಿದರು.

ಮಳೆ ಬಂದಿದ್ದರಿಂದ ಉಳಿದ ಸ್ಪರ್ಧೆಗಳನ್ನು ಸೋಮವಾರಕ್ಕೆ ಮುಂದೂಡಲಾಗಿದೆ ಎಂದು ಸಂಟಕರು ತಿಳಿಸಿದ್ದಾರೆ. ಮುಖಂಡರಾದ ತಾ.ಪಂ. ಮಾಜಿ ಸದಸ್ಯ ಬಸನಗೌಡ ಬಿರಾದಾರ, ಮಾರುತಿರಾವ ಕುಲಕರ್ಣಿ, ಹಣಮಂತ್ರಾಯಗೌಡ ಪಾಟೀಲ, ಅರವಿಂದ ಹಾಲಣ್ಣವರ, ಸಿದ್ದನಗೌಡ ಪಾಟೀಲ, ಮಾಳಿಂಗರಾಯ ಹಾಲಣ್ಣವರ, ವಾಗನಗೇರಿ, ಮೂಕೀಹಾಳ, ಪೀರಾಪುರ ಗ್ರಾಮದ ಸದ್ಭಕ್ತ ಮಂಡಳಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net