

ಹುಬ್ಬಳ್ಳಿ: ಪ್ರತಿಯೊಬ್ಬರು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವ ಮೂಲಕ ಜೀವನದಲ್ಲಿ ಪರಿವರ್ತನೆ ತಂದುಕೊಳ್ಳಬೇಕೆಂದು ಬಳಗೇರಿ ಪಂಚ ಮಣಗಿ ಸಂಸ್ಥಾನ ಹಿರೇಮಠದ ಅಭಿನವ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿಯ ಲಿಂಗರಾಜನಗರ ಸಮುದಾಯ ಭವನದಲ್ಲಿ ಸಾರ್ವಜನಿಕರಿಗೆ ಉಚಿತ ಲಿಂಗಧಾರಣೆ ಮತ್ತು ಡಾ. ಶಿವಕುಮಾರಸ್ವಾಮಿ ಅವರ "ಸಂಕ್ಷಿಪ್ತ ಶಿವ ಪೂಜಾವಿಧಿ ಗ್ರಂಥ ಬಿಡುಗಡೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಪ್ರತಿದಿನ ಸಾತ್ವಿಕ ಆಹಾರ ಸೇವನೆ ಮಾಡಿ ಸತ್ಸಂಗಗಳಲ್ಲಿ ಭಾಗವಹಿಸಬೇಕು. ಪಾಲಕರು ತಮ್ಮ ಮಕ್ಕಳನ್ನು ಮಠ ಮಾನ್ಯಗಳಿಗೆ ಕರೆದುಕೊಂಡು ಹೋಗಿ ಸಂಸ್ಕಾರಗಳನ್ನು ತಿಳಿಸಿಕೊಡಬೇಕೆಂದರು.
15ಕ್ಕೂ ಹೆಚ್ಚು ಜನರಿಗೆ ಲಿಂಗಧಾರಣೆ ಮಾಡಿ, ಲಿಂಗ ಪೂಜೆ ಪ್ರಾತ್ಯಕೆ ನೀಡಿದರು.
ವಿಶ್ರಾಂತ ಅಭಿಯಂತರ ವಿ.ಬಿ. ಕಣವಿ ಅಧ್ಯಕ್ಷತೆ ವಹಿಸಿದ್ದರು. ಗುಳೇದಗುಡ್ಡದ ಡಾ. ಪರಮೇಶ್ವರಿ ಹೊಸಮಠ ಉಪನ್ಯಾಸ ನೀಡಿದರು.
ಉಮಾ ಸಂಗಡಿಗರು ಪ್ರಾಥಿರ್ಸಿದರು, ಡಾ. ಬಿ.ಎಸ್. ಮಾಳವಾಡ ವಂದಿಸಿದರು, ಡಾ. ಮಹಾಂತೇಶ ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು, ನಿವೃತ್ತ ಪ್ರಾಚಾರ್ಯ ಡಾ. ಸಿ.ಆರ್. ಹಿರೇಮಠ, ಪ್ರೊ. ಎಸ್.ವಿ. ಹಿರೇಮಠ, ಪ್ರೋಬಸ್ ಕ್ಲಬ್ ಅಧ್ಯ ಪ್ರೊ. ಕೆ.ಎಸ್. ಕೌಜಲಗಿ, ಮಲ್ಲಿಕಾರ್ಜುನ ಕಡಗಾವಿ ಕಾರ್ಯಕ್ರಮ ಸಂಘಟಿಸಿದ್ದರು.
ಕಟ್ಟಿಮಂಗಳಾ ದೇವಸ್ಥಾನ, ಸಮುದಾಯ ಭವನ, ಮಂಗಳಾ ಮಹಿಳಾ ಮಂಡಳ, ವೀರಾಂಜನೇಯ ದೇವಸ್ಥಾನ, ಪ್ರೋಬಸ್ ಕ್ಲಬ್, ಚಂದ್ರಶೇಖರ ಸ್ವಾಮೀಜಿ ಪ್ರಾರ್ಥನಾ ಮಂದಿರದ ಅಧ್ಯರು ಮತ್ತು ಆಡಳಿತ ಮಂಡಳಿಯ ಸದಸ್ಯರು ಕಾರ್ಯಕ್ರಮಕ್ಕೆ ಸಹಯೋಗ ನೀಡಿದ್ದರು.