ಕುಂದೂರ ಗ್ರಾಪಂಗೆ ಶಿವನಗೌಡ ಅಧ್ಯಕ್ಷ

Kundur Grama Panchayat Election
Published on

ಶಿಗ್ಗಾಂವಿ (ಗ್ರಾ): ತಾಲೂಕಿನ ಕುಂದೂರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಶಿವನಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾದರು. ಒಟ್ಟು 10 ಸದಸ್ಯರ ಬಲ ಹೊಂದಿದ ಗ್ರಾಪಂನಲ್ಲಿ ಈ ಹಿಂದಿನ ಅಧ್ಯಕ್ಷರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಬುಧವಾರ ಚುನಾವಣೆ ನಿಗದಿಯಾಗಿತ್ತು. ಶಿವನಗೌಡ ನಿಂಗನಗೌಡ ಪಾಟೀಲ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ನಡೆಯಿತು. ಚುನಾವಣಾಧಿಕಾರಿಯಾಗಿ ತಾಪಂ ಇಒ ಜಿ. ವಿಶ್ವನಾಥ ಕಾರ್ಯನಿರ್ವಹಿಸಿದರು. ಉಪಾಧ್ಯಕ್ಷೆ ಕಸ್ತೂರೆವ್ವ ಕಬನೂರ, ಗುಡ್ಡನಗೌಡ ಗಿರಿಯಪ್ಪಗೌಡ, ಶಂಭಣ್ಣ ಕಡಕೋಳ, ಶೇಖಪ್ಪ ಮರೆಮ್ಮನವರ, ವಿಶ್ವನಾಥ ಹರವಿ, ನೀಲಪ್ಪ ಹಾವಣಗಿ, ಮಳ್ಳೆಪ್ಪ ಜಾಡರ, ಚಂದ್ರಪ್ಪ ವಾಲ್ಮೀಕಿ, ಮುತ್ತವ್ವ ಮರೆಮ್ಮನವರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net