ಶಿವಯೋಗಿಗಳು ಎಲ್ಲರಿಗೂ ಮಾದರಿ

2
ಸತ್ತಿ ಗ್ರಾಮದ ಪಾಟೀಲ ಪಬ್ಲಿಕ್ ಶಾಲೆಯಲ್ಲಿ ಲಿಂ.ಡಾ.ಮಹಾಂತ ಶಿವಯೋಗಿಗಳ ಜನ್ಮದಿನ ಆಚರಿಸಲಾಯಿತು. ಚೇತನಾ ಪಾಟೀಲ. ಸುಜಾತಾ ಕಶೆಟ್ಟಿ, ಆಸ್ಮಾ ಅತ್ತಾರ್, ರೇವತಿ ಪಾಟೀಲ ಇತರರು ಇದ್ದರು.
Published on

ನಂದೇಶ್ವರ: ಜನರ ದುಶ್ಚಟಗಳನ್ನು ದೂರಮಾಡಿ ಅವರಿಗೆ ಆರೋಗ್ಯ ಅರಿವು ಮೂಡಿಸಿದ ಶ್ರೇಯಸ್ಸು ಲಿಂ.ಡಾ. ಮಹಾಂತ ಶಿವಯೋಗಿಗಳಿಗೆ ಸಲ್ಲುತ್ತದೆ ಎಂದು ಮುಖ್ಯಶಿಕ್ಷಕಿ ಚೇತನಾ ಪಾಟೀಲ ಹೇಳಿದರು.

ಸಮೀಪದ ಸತ್ತಿ ಗ್ರಾಮದಲ್ಲಿ ಪಾಟೀಲ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಶ್ರೀ ಬಾಳಕೃಷ್ಣ ಮಹಾರಾಜ ಸಂಸ್ಕೃತ ಪಾಠಶಾಲೆಯಲ್ಲಿ ಲಿಂ.ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ವ್ಯಸನ ಮುಕ್ತ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿ, ಡಾ.ಮಹಾಂತ ಶಿವಯೋಗಿಗಳು ಜೋಳಿಗೆ ಹಿಡಿದು ಜನರ ದುಶ್ಚಟಗಳ ಭಿಕ್ಷೆ ಬೇಡಿ ದುಶ್ಚಟಗಳಿಂದ ದೂರ ಮಾಡಿದ್ದಾರೆ. ಶಿವಯೋಗಿಗಳು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.

ಲಿಂ.ಡಾ.ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಮಕ್ಕಳು ಸಾಮೂಹಿಕವಾಗಿ ವಚನ ಹೇಳಿದರು. ಶಾಲಾ ಆವರಣದಲ್ಲಿ ಗಿಡ ನೆಡಲಾಯಿತು. ನೀಲಕಂಠ ಹಂಚಿನಾಳ, ರಾಜೇಶ ಬಡಿಗೇರ, ರೇಷ್ಮಾ ಜಂಗಲಿ, ಸುಜಾತಾ ಕಶೆಟ್ಟಿ, ಆಸ್ಮಾ ಅತ್ತಾರ್, ರೇವತಿ ಪಾಟೀಲ, ರಂಜನಾ ನಾಯಿಕ, ಸುಧಾರಾಣಿ ಪಾಟೀಲ, ಪ್ರತೀಕ್ಷಾ ಕೋರಿ, ದಾನಮ್ಮ ಗುಡ್ಡಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net