

ಅಥಣಿ ಗ್ರಾಮೀಣ: ಅಥಣಿ ಮುರಂದ್ರ ಶಿವಯೋಗಿಗಳು ನಿತ್ಯ ಶಿವಯೋಗ ಮತ್ತು ಬಸವಾದಿ ಶರಣರ ತತ್ತ$್ವ ಪಾಲಿಸುವ ಮೂಲಕ ಅಧ್ಯಾತ್ಮ ೇತ್ರದ ಮೇರು ಪರ್ವತ ವಾಗಿದ್ದಾರೆ ಎಂದು ವಿಜಯಪುರ ಸಿದ್ಧಲಿಗೇಶ್ವರಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಗುರುಲಿಂಗದೇವರ ಮಠದಲ್ಲಿ ಮಹಾಶಿವರಾತ್ರಿ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಶರಣ ಸಂಸತಿ ಉತ್ಸವದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರಲ್ಲೂ ದೇವರನ್ನು ಕಂಡ ಶಿವಯೋಗಿಗಳ ಹಾದಿಯಲ್ಲಿ ಮುನ್ನಡೆದರೆ ಮನಸ್ಸಿಗೆ ಶಾಂತಿ, ನೆಮ್ಮದಿ ದೊರಕುತ್ತದೆ. ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾರೆ. ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿರುವುದು ದುಖ@ದ ಸಂಗತಿ ಎಂದರು.
ಸಾಹಿತಿ ಅಪ್ಪಾಸಾಬ್ ಅಲಿಬಾದಿ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಣ ನೀಡುವ ಮೂಲಕ ಸಂಸ್ಕಾರವಂತರನ್ನಾಗಿ ಮಾಡಬೇಕು. ಮಕ್ಕಳ ಚಲನ&ವಲನಗಳ ಬಗ್ಗೆ ಪಾಲಕರು ಗಮನ ಹರಿಸಬೇಕು ಎಂದು ತಿಳಿಸಿದರು.
ನದಿಇಂಗಳಗಾಂವ ಗುರುಲಿಂಗೇಶ್ವರಮಠದ ಪೀಠಾಧ್ಯ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿದರು. ಐ.ಆರ್.ಮಠಪತಿ ನೇತೃತ್ವ ವಹಿಸಿದ್ದರು. ಗ್ರಾಪಂ ಅಧ್ಯೆ ಸಂಗೀತಾ ಚನಗೌಡರ ಉದ್ಘಾಟಿಸಿದರು.
ಎಸ್.ಎಲ್.ಬಾಡಗಿ, ಅಕ್ಕಮ್ಮ ಆಲೂರ, ಗಂಗಾಂಬಿಕಾ ಪಿಳ್ಳೆ, ಭಾರತಿ ಅಲಿಬಾದಿ, ಅನ್ನಾರಾಯ ಚನಗೌಡರ, ಶಿವಾನಂದ ಬಾಗೋಜಿಮಠ, ಸದಾಶಿವ ಅಂಬಿ, ಗುಂಡುರಾವ್ ಕಾಂಬಳೆ, ಅಪ್ಪಾಸಾಬ್ ನದ್ಾ, ಶ್ರೀಶೈಲ ಉಳ್ಳಾಗಡ್ಡಿ, ತಿಪ್ಪಣ್ಣ ಸೂರಣ್ಣವರ, ಪ್ರಶಾಂತ ತೋಟಗಿ ಇತರರಿದ್ದರು. ಉಮೇಶ ಯಳವಿಮಠ ಸ್ವಾಗತಿಸಿದರು. ಮಹಾಂತೇಶ ಗುಳ್ಳಪ್ಪನವರ ನಿರೂಪಿಸಿದರು.