ಶಿವಯೋಗಿಗಳು ಆಧ್ಯಾತ್ಮದ ಅಮರ ಜೀವಿಗಳು

25-05-Shiva-4
ರಾಯಚೂರು ತಾಲೂಕಿನ ಸುಲ್ತಾನಪುರ ಬೃಹನ್ಮಠದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ಧಾರವಾಡದ ಸಾಹಿತಿ ಡಾ.ಶರಭೇಂದ್ರಸ್ವಾಮಿ ಮಾತನಾಡಿದರು. ಶ್ರೀಮಠದ ಪೀಠಾಪತಿ ಶಂಭು ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಕಸಾಪ ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ಮುಖಂಡರಾದ ರಾಮಲಿಂಗಯ್ಯ ಸ್ವಾಮಿ, ದಿಡ್ಡಯ್ಯ ಸ್ವಾಮಿ, ಪಂಪಾಪತಿ ಇದ್ದರು.
Published on

ರಾಯಚೂರು: ಸಂತರು, ಶರಣರು ಮತ್ತು ಶಿವಯೋಗಿಗಳು ಆಧ್ಯಾತ್ಮಕ ಲೋಕದ ಅಮರ ಜೀವಿಗಳಾಗಿದ್ದು, ಅವರು ನುಡಿದ ನುಡಿಗಳು ನಮ್ಮೆಲ್ಲರಿಗೆ ದಾರಿ ದೀಪವಾಗಿವೆ ಎಮದು ಧಾರವಾಡದ ಸಾಹಿತಿ ಡಾ.ಶರಭೇಂದ್ರಸ್ವಾಮಿ ಹೇಳಿದರು.
ತಾಲೂಕಿನ ಸುಲ್ತಾನಪುರದ ಬೃಹನ್ಮಠದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಬೆಳದಿಂಗಳ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮೆಲ್ಲರ ಬದುಕು ಶಿವಮಯವಾಗಿಬೇಕು. ಹಾಗಾದಾಗ ಮಾತ್ರ ಬದುಕು ನಂದನವಾಗುತ್ತದೆ ಎಂದರು.
ನಿಜಗುಣ ಶಿವಯೋಗಿಗಳು ಈ ನೆಲದ ಹಸಿರಾಗಿ ಶಿವ ತತ್ತ್ವದ ಸರಿಯಾಗಿ, ಆಧ್ಯಾತ್ಮದ ಹೊಂಬೆಳಕಾಗಿ ತಮ್ಮದೇ ಆದಂತಹ ವೈರಾಗ್ಯದ ನುಡಿಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದರು. ಅವರು ಹಾಕಿಕೊಟ್ಟ ಹಾದಿನಲ್ಲಿ ನಾವು ಸಾಗಬೇಕಾಗಿದೆ ಎಂದು ಹೇಳಿದರು.
ಶ್ರೀಮಠದ ಪೀಠಾಪತಿ ಶಂಭು ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಗುರು ಮತ್ತು ಗುರಿ ಇದ್ದಾಗ ಮಾತ್ರ ಮಾನವನ ಜೀವನ ಮುಂದೆ ಸಾಗಲು ಸಾಧ್ಯ. ಜೀವನ ಸಾರ್ಥಕತೆ ಕಾಣಲು ಶರಣರು, ಸಂತರು ಹಾಕಿಕೊಟ್ಟ ಹಾದಿಯಲ್ಲಿ ಸಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ತಂಡಗಳಿಂದ ಭಜನೆ ಕಾರ್ಯಕ್ರಮ ಜರುಗಿತು. ಕಸಾಪ ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ಮುಖಂಡರಾದ ರಾಮಲಿಂಗಯ್ಯ ಸ್ವಾಮಿ, ದಿಡ್ಡಯ್ಯ ಸ್ವಾಮಿ, ಪಂಪಾಪತಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net