ಸಮಾಜ ಏಳಿಗೆಗೆ ಶ್ರಮಿಸಿದ ಶಿವಯೋಗಿ

Shivayogi worked hard for social welfare
ಕಲಕೇರಿ ಗ್ರಾಮದ ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಮಹಾಶಿವಯೋಗಿ ವೇಮನರ ಜಯಂತಿ ಆಚರಿಸಲಾಯಿತು. ಸಿ.ಎಸ್.ಹಿರೇಮಠ, ಜಗದೀಶ ಗುಮಶೆಟ್ಟಿ, ಸಿದ್ದಣ್ಣ ಚಳ್ಳಗಿ, ಕಾಶಿನಾಥ ಹೆಗ್ಗಣದೊಡ್ಡಿ ಇತರರಿದ್ದರು.
Published on

ಕಲಕೇರಿ: ಗ್ರಾಮದ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಘದ ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶುಕ್ರವಾರ ಮಹಾಶಿವಯೋಗಿ ವೇಮನರ ಜಯಂತಿ ಆಚರಿಸಲಾಯಿತು. ಯೋಗಿ ಮೇಮನರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಬಸವೇಶ್ವರ ಸಂಯುಕ್ತ ಪಪೂ ಕಾಲೇಜಿನ ಪ್ರಾಚಾರ್ಯ ಸಿ.ಎಸ್.ಹಿರೇಮಠ, ಮುಖ್ಯಗುರು ಜಗದೀಶ ಗುಮಶೆಟ್ಟಿ ಮಾತನಾಡಿ, ವೇಮನರು ತಮ್ಮ ವಚನಗಳ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ ವ್ಯಕ್ತಿಯಾಗಿದ್ದಾರೆ. ಅವರ ತತ್ವ ಮತ್ತು ಆದರ್ಶಗಳು ಇಂದಿನ ಯುವ ಪೀಳಿಗೆಗೆ ಮಾದರಿಯಾಗಬೇಕಿದೆ ಎಂದು ಅವರು ಹೇಳಿದರು.

ಸಂಸ್ಥೆ ನಿರ್ದೇಶಕ ಸಿದ್ದಣ್ಣ ಚಳ್ಳಗಿ, ಕಾಶಿನಾಥ ಹೆಗ್ಗಣದೊಡ್ಡಿ, ಉಪನ್ಯಾಸಕರಾದ ಬಿ.ಜಿ. ಚನಗೊಂಡ, ಡಾ.ಜಿ.ಜಿ. ಮೇಡೆದಾರ, ಎಸ್.ಎಸ್. ಕಲಶೆಟ್ಟಿ, ರವಿಕುಮಾರ ಗುಮಶೆಟ್ಟಿ, ಬಸಪ್ಪ ಕುಂಬಾರ, ವಿಶ್ವನಾಥ ಸಿಂದಗಿ, ಎಸ್.ಎಸ್. ಕೋರವಾರಮಠ, ಎಸ್.ಎಸ್. ರಾಣಗಟ್ಟಿ, ಕೆ.ಎಸ್. ದೇಸಾಯಿ, ನಿಂಗನಗೌಡ ಗುಂಡಕನಾಳ, ವಿ.ಟಿ. ಜಾನಮಟ್ಟಿ, ಶಿವಾನಂದ ಹರಿಜನ, ವೀರೇಶ ಝುಳಕಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net