

ಬಳ್ಳಾರಿ: ಸಮಾಜಕ್ಕೆ ದಾರಿದೀಪವಾಗಿದ್ದ ಶ್ರೀ ಸಿದ್ದರಾಮೇಶ್ವರರ ಸಂದೇಶಗಳನ್ನು ಜೀವನದಲ್ಲಿ ಪ್ರತಿಯೊಬ್ಬರು ಅಳವಡಿಸಿಕೊಳ್ಳೋಣ ಎಂದು ಶಾಸಕ ಜಿ. ಸೋಮಶೇಖರ ರೆಡ್ಡಿ ಹೇಳಿದರು.
ನಗರದ ಜೋಳದರಾಶಿ ದೊಡ್ಡರಂಗನಗೌಡ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಶಿವಯೋಗಿ ಶ್ರೀಸಿದ್ದರಾಮೇಶ್ವರ ಜಯಂತಿಗೆ ಚಾಲನೆ ನೀಡಿ ಮಾತನಾಡಿದರು.
ಸಮಾಜಕ್ಕೆ ದಾರಿದೀಪವಾಗಿದ್ದ ಶ್ರೀ ಸಿದ್ದರಾಮೇಶ್ವರ ಸರ್ವರೂ ಸಮಾನತೆ ಎಂಬ ಸಿದ್ದತೆ ಹೊಂದಿದವರು.ಬೋವಿ ಸಮಾಜದಲ್ಲಿ ಜನಿಸಿದ ಮಹಾನುಭವ ನೇರ ಬೇವ ಸಿದ್ದರಾಮೇಶ್ವರು ಹಲವು ಶತಮಾನಗಳ ಹಿಂದೆ ಮಹಿಳೆ ಸಮಾನತೆ ಪ್ರತಿಪಾದಿಸಿದ್ದರು.
ಅಂತ ಮಹಾನ ಶರಣನ ಜಯಂತಿಯನ್ನು ಸರ್ಕಾರದಿಂದ ಆಚರಿಸುತ್ತಿರುವುದು ಸಂತಸದ ಸಂಗತಿ.ಸಿದ್ದರಾಮೇಶ್ವರರ ಆಶಯ, ಸಂಕಲ್ಪಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡು ಸಮಾಜ ಜೀವನದಲ್ಲಿ ಮುನ್ನಲೆ ಸಾಧಿಸಬೇಕು ಎಂದರು.
ಬೋವಿ ಸಮಾಜವನ್ನು ಅಸಂಘಟಿತ ವಲಯದಲ್ಲಿ ಸೇರಿಸಿ ಪಿಂಚಣೆ ಬರುವಂತೆ ಪ್ರಧಾನಿ ಮೋದಿ ಮಾಡಿದ್ದು, ಕಾರ್ಮಿಕರು ಸದ್ಬಳಕೆ ಮಾಡಿಕೊಳ್ಳಬೇಕು.ಬೋವಿ ಸಮಾಜದಿಂದ ಬೇಡಿಕೆಯಿರದಿದ್ದರೂ ಅನುಕೂಲವಾಗಲಿ ಎಂದು ನಗರದಲ್ಲಿ ಬೋವಿ ಭವನ ನಿರ್ಮಾಣಕ್ಕೆ ಮಾಡುವುದಕ್ಕೆ ಅನುಮೋದನೆ ನೀಡುವೆ ಎಂದು ಭರವಸೆ ನೀಡಿದರು.
ಹೊಸಪೇಟೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಧ್ಯಾಪಕ ಡಾ.ಗಾದೆಪ್ಪಮಾತನಾಡಿ, ಸಿದ್ದರಾಮೇಶ್ವರ ಅವರಿಗೆ ದೊಡ್ಡ ಶಿಷ್ಯ ಬಳಗವಿದೆ.ಸಮಾಜದ ಏಳ್ಗೆಗೆ ಶ್ರಮಿಸಿದ ಅವರ ಪರಿಶ್ರಮ ಅಪಾರ.೮೫೦ ವರ್ಷಗಳ ಹಿಂದೆ ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ತಮ್ಮದೆ ಆದ ಕೊಡುಗೆ ನೀಡಿದ ಸಿದ್ದರಾಮೇಶ್ವರ ಕೆಲಸ ವರ್ಣಾತೀತ ಎಂದರು.
ಎಸಿ ರಮೇಶ ಕೋನರಡ್ಡಿ, ಮುಖಂಡರಾದ ಸುಕ್ಕಣ್ಣ, ಶಿವಯ್ಯ, ಮಲ್ಲಿಕಾರ್ಜುನ ತೋರಣಗಲ್ಲು, ಹುಲಗಪ್ಪ ಕೆ.ವೀರಾಪೂರ, ಗೋವಿಂದಪ್ಪ, ರಾಮಾಂಜನೆಯಲು, ಹೊನ್ನೂರಸ್ವಾಮಿ ಸೇರಿ ಮತ್ತಿತರರು ಇದ್ದರು.
ಫೋಟೋ
ಬಳ್ಳಾರಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತಿ ಮೆರವಣಿಗೆಗೆ ಶಾಸಕ ಸೋಮಶೇಖರರಡ್ಡಿ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು.