

ಚಿತ್ರದುರ್ಗ: ಡಿಸಿ ಕಚೇರಿಯಲ್ಲಿ ಇಂದು ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಆಚರಿಸಲಾಯಿತು.
ಡಿಸಿ ಆರ್.ವಿನೋತ್ ಪ್ರಿಯಾ, ಜಿಪಂ ಸಿಇಒ ಸಿ.ಸತ್ಯಭಾಮ, ಎಸಿ ವಿ. ಪ್ರಸನ್ನ, ಪಿಡಿ ರಾಜಶೇಖರ್, ತಹಸೀಲ್ದಾರ್ ಜೆ.ಸಿ.ವೆಂಕಟೇಶಯ್ಯ, ಭೋವಿ ಸಮಾಜದ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ, ಕಾರ್ಯದರ್ಶಿ ಎಚ್.ಲಕ್ಷ್ಮಣ ಹಾಗೂ ಪದಾಧಿಕಾರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ ಮತ್ತಿತರರು ಇದ್ದರು.
ಈ ವೇಳೆ ಉಪನ್ಯಾಸ ನೀಡಿದ ಪ್ರಾಧ್ಯಾಪಕ ನಾಗಭೂಷಣ ಬಗ್ಗನಾಡು ಅವರು, ಸೊನ್ನಲಿಗೆ ಸಿದ್ದರಾಮರು ಕಾಯಕಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದರು. ಭಾರತ ವಿಶಿಷ್ಟ ದೇಶ, ಇಂತಹ ದೇಶದಲ್ಲಿಯ ಶರಣರು ೧೨ ನೇ ಶತಮಾನದಲ್ಲಿಯೇ ಕೊಟ್ಟಂತಹ ವಚನ ಸಾಹಿತ್ಯ ಪ್ರಪಂಚದಲ್ಲಿಯೇ ಶ್ರೇಷ್ಠವೆನಿಸಿದೆ. ಕಾಯಕವೇ ಕೈಲಾಸ ಎಂದು ಶರಣರು ಪ್ರತಿಪಾದಿಸಿದ್ದರು ಎಂದರು.
ಸಿದ್ದರಾಮರ ರಚನೆಯ ಹೆಚ್ಚು ವಚನಗಳು ದೊರೆತಿವೆ. ಅವರ ೭೨ ಗದ್ದುಗೆ ಹಾಗೂ ಅವರು ಕಟ್ಟಿಸಿದ ನೂರಾರು ಕೆರೆಗಳು ಇವೆ ಎಂದರು.