ಮೀರ್ ಸಾದಿಕ್ ಪದ ಸಿರಾಜ್ ಶೇಖ್‌ಗೆ ಹೆಚ್ಚು ಅನ್ವಯ: ಬಿ.ವಿ.ಶಿವಯೋಗಿ ತಿರುಗೇಟು

IMG_20220823_134252.jpg
Published on

ಹೊಸಪೇಟೆ: ಮೀರ್ ಸಾದಿಕ್ ಎಂಬ ಪದ ಇತರರಿಗಿಂತ ಮಾಜಿ ಶಾಸಕ ಸಿರಾಜ್ ಶೇಖ್ ಅವರಿಗೆ ಹೆಚ್ಚು ಅನ್ವಯಿಸುತ್ತದೆ ಎಂದು ವಿಜಯನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶಿವಯೋಗಿ ತಿರುಗೇಟು ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿರಾಜ್ ಶೇಖ್ ಇತ್ತೀಚೆಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ನಲ್ಲಿ ಬಿಜೆಪಿ ಏಜೆಂಟರಿದ್ದಾರೆ. ಮೀರ್ ಸಾದಿಕ್‌ಗಳಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ. ಆದರೆ, ಹಲವು ವರ್ಷಗಳಿಂದ ಅವರೇ ಪಕ್ಷ ವಿರೋಧಿ ಚಟುವಟಿಕೆಗಳಲ್ಲೇ ತೊಡಗಿಸಿಕೊಂಡಿದ್ದಾರೆ. ೧೯೮೦ ರಿಂದ ಇಲ್ಲಿವರೆಗೆ ನಡೆದ ಚುನಾ ವಣೆಗ ಳಲ್ಲಿ ಪಕ್ಷದ ಅಭ್ಯರ್ಥಿ ವಿರುದ್ಧವಾಗಿಯೇ ಕೆಲಸ ಮಾಡಿದ್ದಾರೆ ಎಂದು ದೂರಿದರು.
ಸಿರಾಜ್ ಶೇಖ್ ನಗರದಲ್ಲಿ ವಾರ್ಡ್ ವಾರು ನಡೆಸುತ್ತಿರುವ ‘ಪ್ರಶ್ನಿಸು ವಿಜಯನಗರ’ ಅಭಿಯಾನ ಜನಪರವಾಗಿದ್ದರೂ, ಅದು ಪಕ್ಷದ ಅಧಿಕೃತ ಕಾರ್ಯಕ್ರಮವಲ್ಲ. ಈ ಬಗ್ಗೆ ಪಕ್ಷದ ಜಿಲ್ಲಾ, ಬ್ಲಾಕ್ ಕಾಂಗ್ರೆಸ್ ಗಮನಕ್ಕಿಲ್ಲ. ಅವರ ಏಕಪಕ್ಷೀಯ ನಿರ್ಧಾರ, ಪಕ್ಷ ವಿರೋಧಿ ಚಟುವಟಿಕೆಗಳ ಬಗ್ಗೆ ಕೆಪಿಸಿಸಿ ಹಾಗೂ ಎಐಸಿಸಿ ಗಮನ ಸೆಳೆಯಲಾಗಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸಿರಾಜ್ ಶೇಖ್ ನೇಮಕಕ್ಕೂ ನಾವು ವಿರೋಧಿಸಿದ್ದೇವೆ. ಪಕ್ಷದಲ್ಲಿ ಭಿನ್ನಭಿಪ್ರಾಯ, ಬಣಗಳಿಲ್ಲ. ಆದರೆ, ಸಿರಾಜ್ ಶೇಕ್ ಒಂದೇ ಪ್ರತ್ಯೇಕ ಬಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಾಯಕ ಶೆಟ್ಟರ್, ಪ್ರಮುಖರಾದ ಎಚ್.ಎನ್.ಎಫ್.ಇಮಾಮ್ ನಿಯಾಜಿ, ಸಿ.ಬಿ.ಬಸವರಾಜ, ವೀರಭದ್ರಪ್ಪ ನಾಯ್ಕ್, ಎಲ್.ಮಾರೆಣ್ಣ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net