ಸಂಭ್ರಮದಿಂದ ನಡೆದ ಶಿವಯೋಗೀಶ್ವರ ನೀರಾಟ

Shivayogeeshwara water festival celebrated with enthusiasm
ಇಂಡಿ ತಾಲೂಕಿನ ಸಾಲೋಟಗಿಯ ಶಿವಯೋಗೀಶ್ವರರ ನೀರಾಟದ ದೃಶ್ಯ.
Published on

ಇಂಡಿ: ತಾಲೂಕಿನ ಸಾಲೋಟಗಿ ಗ್ರಾಮದ ಆರಾಧ್ಯ ದೆವ ಶ್ರೀ ಶಿವಯೋಗೀಶ್ವರ ಜಾತ್ರೆ ಪ್ರಯುಕ್ತ ಗುರುವಾರ ರಾತ್ರಿ ನೀರಾಟ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಶುಕ್ರವಾರ ನಸುಕಿನ ಐದು ಗಂಟೆಗೆ ನೀರಾಟ ಮುಕ್ತಾಯವಾಯಿತು.

ಗುರುವಾರ ಊರೊಳಗಿನ ಗುಡಿಯಿಂದ ಶಿವಯೋಗೀಶ್ವರರ ಉತ್ಸವ ಮೂರ್ತಿಯನ್ನು ಭವ್ಯ ಮೆರವಣೆಗೆಯಲ್ಲಿ ಹೊರಗಿನ ಗುಡಿಗೆ ಒಯ್ದು ಗದ್ದುಗೆಯಲ್ಲಿ ಕೂಡಿಸಿದ ನಂತರ ಸರಿಯಾಗಿ ರಾತ್ರಿ ಒಂದು ಗಂಟೆಗೆ ನೀರಾಟ ಪ್ರಾರಂಭವಾಯಿತು.

ಗಂಗಾಂಬಿಕೆಯನ್ನು ಸಂಕೇತಿಸುವ ಗಂಗಮ್ಮನ ಬಿಂದಿಗೆಯ ಬಾಯಿಯನ್ನು ಶ್ರೀಗಂಧದ ನೀಳವಾದೆಲೆಯುಕ್ತ ಚಬಕಿಗಳಿಂದೊಂದು ಹನಿ ನೀರೂ ಇಳಿಯದಂತೆ ಭದ್ರಪಡಿಸುತ್ತಾರೆ. ಹೊರಗಿನ ಗುಡಿಯ ಮುಂದೆ ಮತ್ತು ಹಿಂದೆ ಇರುವ ಎರಡು ಬಾವಿಗಳಿಂದ ಭಕ್ತರು ಬಿಂದಿಗೆಗಳಲ್ಲಿ ನೀರು ಹೊತ್ತು ಓಡುತ್ತ ಶಿವಯೋಗೀಶ್ವರ ಎಂದು ಕೂಗುತ್ತ ಬಿಂದಿಗೆಯ ಮೇಲೆ ನೀರು ಸುರಿಸುತ್ತಾರೆ.

ಗಂಗಮ್ಮನ ಬಿಂದಿಗೆಯನ್ನು ಶಿವಯೋಗೀಶ್ವರರೆಡಕ್ಕೆ ತಂದು ಇಟ್ಟರು. ಶ್ರೀಗಂಧದ ಚಟುಕಗಳ ಮೂಲಕ ಬಿಂದಿಗೆಯಲ್ಲಿ ಸಂಗ್ರವಾದ ನೀರಿನ ಪ್ರಮಾಣದಷ್ಟು ಆ ವರ್ಷದ ಮಳೆಯಾಗುತ್ತದೆ ಮತ್ತು ಊರಲ್ಲಿ ಸಮದ್ಧಿ ತುಂಬುತ್ತದೆ ಎಂಬುದು ನವಾದ ನಂಬಿಕೆ.

ನೀರಾಟದ ಸಮಯದಲ್ಲಿ ಸಂಸ್ಥೆ ಅಧ್ಯರಾದ ಸೋಮಯ್ಯ ಚಿಕ್ಕಪಟ, ಗಣ್ಯರಾದ ಶಿವಯೋಗಪ್ಪ ನೇದಲಗಿ, ಭೀಮರಾಯಗೌಡ ಪಾಟೀಲ, ಮಲ್ಲನಗೌಡ ಪಾಟೀಲ, ಜೀತಪ್ಪ ಕಲ್ಯಾಣಿ, ಶಿವಯೋಗಪ್ಪ ಜೋತಗೊಂಡ, ಸಾಹಿತಿಗಳಾದ ಗೀತಯೋಗಿ, ದಯಾನಂದ ಸ್ವಾಮಿ, ಸೋಮನಾಥ ಶಿವೂರ, ಭೀಮರಾಯ ಪತ್ತಾರ, ಶಿವಾನಂದ ಚಾಳೀಕಾರ ಮತ್ತಿತರರಿದ್ದರು.

ನೀರಾಟದ ಹಿನ್ನೆಲೆ : ಶ್ರೀ ಶಿವಯೋಗೀಶ್ವರರ ಮಾತಾಪಿತರ ಇಷ್ಟದ ಮೇರೆಗೆ ಶಿವಯೋಗೀಶ್ವರರ ಮದುವೆಯು ಗಂಗಾಂಬಿಕೆಯೊಂದಿಗೆ ನಡೆಯುವ ಸಂದರ್ಭ ಮದುವೆ ಜೋಡಿಯನ್ನು ಸುರಿಗೆ ಸುತ್ತಿ ವಧು&ವರರ ಮೇಲೆ ಸುರಿಗೆ ನೀರನ್ನು ಹಾಕುವಾಗ ಅಜನ್ಮ ಬ್ರಹ್ಮಚಾರಿಗಳಾದ ಶಿವಯೋಗೀಶ್ವರರು ಮದುವೆ ನಿರಾಕರಿಸಿ ಮದುವೆ ಮಂಟಪದಿಂದ ಹೊರ ಹೋಗುತ್ತಾರೆ. ದಾಂಪತ್ಯದ ಸಂಬಂಧ ಬಿಟ್ಟು ಶಿವಯೋಗೀಶ್ವರ ಹೋಗಬೇಡೆಂದು ಕಳಸಗಳಲ್ಲಿ ತುಂಬಿದ ಸುರಿಗೆ ನೀರನ್ನು ಎರಚುತ್ತಾರೆ. ಶಿವಯೋಗಿಶ್ವರರು ಅಲ್ಲಿಂದ ದೂರ ಹೋಗಲಾಗಿ ಸುರಿಗೆ ನೀರು ಗಂಗಾಂಬಿಕೆಯ ಮೇಲೆ ಮಾತ್ರ ಬೀಳುತ್ತದೆ. ಈ ಸನ್ನಿವೇಶವೇ ನೀರಾಟದ ರೂಪದಲ್ಲಿ ಧಾರ್ಮಿಕ ಆಧ್ಯಾತ್ಮಿಕ ಮತ್ತು ಸಾಂಸತಿಕ ಸಂಕೇತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net