ಶಿವಯೋಗಿಗಳು ನುಡಿದಂತೆ ನಡೆದವರು

22-Athani-1-Web1
ಅಥಣಿ ಗಚ್ಚಿನಮಠದ ಲಿಂ.ಮುರುಘೇಂದ್ರ ಶಿವಯೋಗಿಗಳ ಪಲ್ಲಕ್ಕಿ ಪೂಜೆ ಕಾರ್ಯಕ್ರಮವನ್ನು ಶಿವಬಸವ ಸ್ವಾಮೀಜಿ, ಬಸವಕಿರಣ ಸ್ವಾಮೀಜಿ ನೆರವೇರಿಸಿದರು. ಸುರೇಶ ಗೋಟಖಿಂಡಿ, ಉದಯ ಕಾರವೇಕಾರ ಇತರರು ಇದ್ದರು.
Published on

ಅಥಣಿ: ಮಹಾತಪಸ್ವಿ ಲಿಂ.ಮುರುೇಂದ್ರ ಶಿವಯೋಗಿಗಳು ಬಸವಣ್ಣನವರ ವಚನಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಅದರಂತೆ ನಡೆದು ತೋರಿದ ಶಿವಯೋಗಿಯಾಗಿದ್ದಾರೆ ಎಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ಹೇಳಿದ್ದಾರೆ. ಲಿಂ.ಮುರುಘೇಂದ್ರ ಶಿವಯೋಗಿಗಳ 185ನೇ ಜಯಂತಿ ಅಂಗವಾಗಿ ಸೋಮವಾರ ಸ್ಥಳೀಯ ಗಚ್ಚಿನಮಠದಲ್ಲಿ ಹಮ್ಮಿಕೊಂಡಿದ್ದ ಪಲ್ಲಕ್ಕಿ ಪೂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಶ್ರೀಮಠದಲ್ಲಿ ಅನ್ನದಾಸೋಹ, ಶಿಕ್ಷಣ, ಆಶ್ರಯ ನೀಡುವಂತೆ ಪ್ರೇರಣೆ ನೀಡಿದವರು. ಹಾಗಾಗಿ ಲಕ್ಷಾಂತರ ಭಕ್ತರನ್ನು ಗಚ್ಚಿನಮಠ ಹೊಂದಿದೆ. ಅದಕ್ಕೆ ಕಾರಣ ಮುರುಘೇಂದ್ರ ಶಿವಯೋಗಿಗಳ ದಿವ್ಯಶಕ್ತಿ ಜಾಗೃತವಾಗಿದೆ ಎಂದರು.

ಚಳ್ಳಕೇರಿಯ ಬಸವಕಿರಣ ಸ್ವಾಮೀಜಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರಿಗೆ ಆಶೀರ್ವದಿಸಿದ ಮುರುೇಂದ್ರ ಶಿವಯೋಗಿಗಳು ದೇಶಕ್ಕೆ ಸ್ವಾತಂತ್ರ್ಯ ಸಿಗುವ ಕುರಿತು ಬಾಲಗಂಗಾಧರ ಟಿಳಕರಿಗೆ ಭರವಸೆ ನೀಡಿದಂತಹವರು. ಹಾಗಾಗಿ ಹಲವಾರು ಜನರು ಶಿವಯೋಗಿಗಳ ಆಶೀರ್ವಾದದಿಂದ ಮಹಾನ್ ನಾಯಕರಾಗಿದ್ದಾರೆ ಎಂದು ತಿಳಿಸಿದರು.

ಗಚ್ಚಿನಮಠದಲ್ಲಿ ಬೆಳಗ್ಗೆ ಶ್ರೀಗಳ ಕರ್ತೃ ಗದ್ದುಗೆಗೆ ವಚನಾಭಿಷೇಕ, ಮಹಾ ಮಂಗಳರಾತಿ ನಂತರ ಶಿವಯೋಗಿಗಳ ಭಾವಚಿತ್ರ ಮತ್ತು ವಚನ ಸಂಪುಟಗಳನ್ನಿಟ್ಟ ಪಲ್ಲಕ್ಕಿಗೆ ಗಚ್ಚಿನಮಠದಲ್ಲಿ ಪೂಜೆ ಸಲ್ಲಿಸಲಾಯಿತು. ನಂತರ ಎಲ್ಲರಿಗೂ ಮಹಾಪ್ರಸಾದ ವಿತರಿಸಲಾಯಿತು.

ಸುರೇಶ ಗೋಟಖಿಂಡಿ, ಉದಯ ಕಾರವೇಕಾರ, ರಾಜು ಬಿಳ್ಳೂರ, ಶಿವಯೋಗಿ ಅಳಿಮಟ್ಟಿ, ಮುರುಘೇಶ ನಿಡೋಣಿ, ಸುಭಾಷ ಗುಡೋಡಗಿ, ಶಂಕರ ಅಳಿಗಿಡದ, ಬಸವರಾಜ ಕೋಟಿ, ಮಹಾದೇವ ಹಳ್ಳದಮಳ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net