ಶಿವಸಿಂಪಿ ಸಿರಿ ಪ್ರಶಸ್ತಿ ಪ್ರದಾನ

shivashimpi
Published on

ಹುಬ್ಬಳ್ಳಿ: ಆನಂದನಗರ ರಸ್ತೆ ಶಿವಪುತ್ರಸ್ವಾಮಿ ಮಠದ ಅಭಿನವ ಮಂಟಪದಲ್ಲಿ ಮಾ. 3ರಂದು ಬೆಳಗ್ಗೆ 8 ಗಂಟೆಗೆ ಸಂಜೆ 6 ಗಂಟೆಯವರೆಗೆ ಕರ್ನಾಟಕ ಶಿವಸಿಂಪಿ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿದೆ. ಇದೇ ಮೊದಲ ಬಾರಿಗೆ ಶಿವಸಿಂಪಿ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಹುಬ್ಬಳ್ಳಿ ಶಿವಸಿಂಪಿ ಸಮಾಜದ ಅಧ್ಯಕ್ಷ ಡಾ. ಪ್ರಭಾಕರ ಶಿವಸಿಂಪಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿರಹಟ್ಟಿಯ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹಾಗೂ ಶಿವಪುತ್ರಸ್ವಾಮಿ ಮಠದ ಶ್ರೀ ಅಭಿನವ ಸಿದ್ಧಾರೂಢ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾಜಿ ಸಿಎಂ ಜಗದೀಶ ಶೆಟ್ಟರ್ ಉದ್ಘಾಟಿಸುವರು. ವಾರಾಣಸಿ ಎಸಿಪಿ ಡಾ. ಚನ್ನಪ್ಪ ಶಿವಸಿಂಪಿ ಹಾಗೂ ಗಂಗಾವತಿ ಸಿಲ್ಕ್ಸ್ ಪ್ಯಾಲೇಸ್​ನ ಆನಂದ ಕಮತಗಿ ಅವರಿಗೆ ನಿವೃತ್ತ ಡಿಜಿಪಿ ಶಂಕರ ಬಿದರಿ ಪ್ರಶಸ್ತಿ ಪ್ರದಾನ ಮಾಡುವರು ಎಂದು ಹೇಳಿದರು.

75 ವರ್ಷ ಮೇಲ್ಪಟ್ಟ ಸಮಾಜದ ನೂರು ಜನ ಹಿರಿಯರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ರಾಜ್ಯ ಮತ್ತು ರಾಷ್ಟ್ರದಲ್ಲಿ ಸಾಧನೆಗೈದ ಸಮಾಜದ ಸಾಧಕರಿಗೆ ಸನ್ಮಾನ ಮಾಡಲಾಗುವುದು. ಹಾಡು, ನೃತ್ಯ, ಚಿಣ್ಣರಿಗಾಗಿ ವೇಷಭೂಷಣ, ರಂಗೋಲಿ, ಭರತನಾಟ್ಯ, ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂತೋಷ ಬಾಳಿಕಾಯಿ, ಪ್ರಸಾದ ಕರನಂದಿ, ಲೋಚನಪ್ಪ ಸಂಶಿ, ನಾಗರಾಜ ಜವಳಿ, ಇಷ್ಟಲಿಂಗಪ್ಪ ಮಿರ್ಜಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net