ದೇವರ ಪೂಜೆಯಿಂದ ಸಂಸ್ಕಾರ ಲಭ್ಯ

06 CHN
Published on

ಚನ್ನಗಿರಿ: ದೇವರ ಪೂಜೆ, ಪುನಸ್ಕಾರದಿಂದ ಜನರು ಸಂಸ್ಕಾರವಂತರಾಗುತ್ತಾರೆ ಎಂದು ಚನ್ನಗಿರಿ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ ಹೇಳಿದರು.

ತಾಲೂಕಿನ ಜೋಳದಾಳು ಅಮ್ಮನಗುಡ್ಡದ ಬಾಳೆಕಲ್ಲು ಸಿದ್ದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ನೂತನ ವಿಗ್ರಹ ಪ್ರಾಣ ಪ್ರತಿಷ್ಠಾಪನೆ, ಹೋಮ, ಯಜ್ಞ, ಹವನ, ಕುಂಭಾಭಿಷೇಕ ಹಾಗೂ ಮಹಾಪೂಜೆ ನೆರವೇರಿಸಿ ಮಾತನಾಡಿದರು.

ಹಿಂದಿನ ಕಾಲದಲ್ಲಿ ಜನರು ಭಕ್ತಿಗೆ ಹೆಚ್ಚು ಪ್ರಾಶಸ್ಱ ನೀಡುತ್ತಿದ್ದರು. ಅದಕ್ಕಾಗಿ ಎಲ್ಲ ಕಡೆ ದೇವಸ್ಥಾನ ನಿರ್ವಿುಸುತ್ತಿದ್ದರು. ಆಧುನಿಕತೆ ಬಂದ ನಂತರ ದೇವಾಲಯಗಳಿಗೆ ಹೋಗದೆ ಇರುವುದು ಫ್ಯಾಷನ್ ಆಗಿದೆ ಎಂದು ವಿಷಾದಿಸಿದರು.

ಮನೆಯಲ್ಲಿರುವ ತಂದೆ, ತಾಯಿಯನ್ನು ದೇವರು ಎಂದು ನಂಬಿದವರು ಗುಡಿಯಲ್ಲಿ ಇರುವಂತಹ ದೇವರನ್ನು ಏಕೆ ಒಪ್ಪುವುದಿಲ್ಲ. ದೇವರು ಎಲ್ಲ ಕಡೆ ಇದ್ದಾನೆ. ಅವರ ಮಾರ್ಗದರ್ಶನದಲ್ಲಿ ಎಲ್ಲವು ನಡೆಯುತ್ತದೆ. ಅದೇ ಕಾರಣದಿಂದ ಜನರು ಶಾಂತಿ ಮತ್ತು ನೆಮ್ಮದಿಯಿಂದ ಇದ್ದಾರೆ ಎಂದರು.

ಬೆನಕನಹಳ್ಳಿ ಅನಂದಯ್ಯ ಶಾಸ್ತ್ರಿ, ಭದ್ರಾವತಿ ಬಸಯ್ಯ ಶಾಸ್ತ್ರಿ, ಕೋಟೋಜಿರಾವ್, ಕೆಂಚೋಜಿರಾವ್, ಮಲ್ಲೇಶ್ ನಾಯ್ಕ, ಮರವಂಜಿ ಗ್ರಾಮದ ಭಜನಾ ತಂಡದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net