ಅಧ್ಯಕ್ಷರಾಗಿ ಶಿವಶಂಕರ ಹಂಪಣ್ಣವರ ಆಯ್ಕೆ

7 vikram 10
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಇಲ್ಲಿನ ಧಾರವಾಡ ದಲಾಲ ಮತ್ತು ವರ್ತಕರ ಸಂಘದ ನೂತನ ಅಧ್ಯಕ್ಷರಾಗಿ ಸತತ ಆರನೇ ಬಾರಿಗೆ ಹಿರಿಯ ವ್ಯಾಪಾರಸ್ಥ ಶಿವಶಂಕರ ಹಂಪಣ್ಣವರ ಅವಿರೋಧವಾಗಿ ಆಯ್ಕೆಯಾದರು.

ಬಸವಂತಪ್ಪ ಪೂಜಾರ ಅಧ್ಯಕ್ಷತೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸಂಘದ ನೂತನ ಅಧ್ಯಕ್ಷರಾಗಿ ಶಿವಶಂಕರ ಹಂಪಣ್ಣವರ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ತಮ್ಮಣ್ಣ ಯಂಡಿಗೇರಿ, ಕಾರ್ಯದರ್ಶಿಯಾಗಿ ಬಸವರಾಜ ತೆಗ್ಗಿ, ಜಂಟಿ ಕಾರ್ಯದರ್ಶಿಯಾಗಿ ರಾಜೇಂದ್ರ ಜಾಧವ, ಖಜಾಂಚಿಯಾಗಿ ಬಸವರಾಜ ಸುರೇಬಾನ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಸ್​.ವೈ. ಸಂಕೋಜಿ, ಸಂಗಪ್ಪ ಕಪಲಿ, ಮೈನುದ್ದೀನ್​ ಅಮ್ಮಿನಭಾವಿ, ಶಂಕರ ಬೆಂಡಿಗೇರಿ, ಉಮೇಶ ಗುಡ್ಡದ, ಈರಣ್ಣ ಹಂಚಿನಮನಿ, ವಿಶೇಷ ಆಹ್ವಾನಿತರಾಗಿ ಎಸ್​.ಜಿ. ಖಾನಗೌಡ್ರ, ಎಂ.ಎಫ್​. ಬಾಳನಗೌಡ್ರ, ಮಲ್ಲಿಕಾರ್ಜುನ ನಂದಿಗೋಳ, ರಾಜು ಮಟ್ಟಿ, ವೈ.ಎಸ್​. ಮುಂದಿಮನಮನಿ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net