

ಸರಗೂರು: ತಾಲೂಕಿನ ಚಕ್ಕೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎನ್.ಸಿ.ಶಿವಶಂಕರ (ಶ್ಯಾಮ್ ಚಕ್ಕೂರು), ಉಪಾಧ್ಯಕ್ಷರಾಗಿ ಕಾಳಿಹುಂಡಿ ರತ್ನಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾಲೂಕಿನ ಕೆ ಬೆಳತ್ತೂರು ಗ್ರಾಪಂ ವ್ಯಾಪ್ತಿಯ ಚಕ್ಕೂರು ಬುಧವಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶಿವಶಂಕರ, ಉಪಾಧ್ಯಕ್ಷ ಸ್ಥಾನಕ್ಕೆ ರತ್ನಯ್ಯ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಿ.ಎನ್.ಗಿರೀಶ್ ಘೋಷಿಸಿದರು.
ಅಧ್ಯಕ್ಷ ಎನ್.ಸಿ.ಶಿವಶಂಕರ ಮಾತನಾಡಿ, ಎಲ್ಲ ನಿರ್ದೇಶಕರ ಸಹಕಾರದಿಂದ ಅಧ್ಯಕ್ಷನಾಗಿದ್ದಾನೆ. ಸರ್ಕಾರದಿಂದ ಬರುವ ಸೌಲಭ್ಯಗಳನ್ನು ರೈತರಿಗೆ ತಲುಪಿಸುವ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಸಂಘದ ಏಳಿಗೆಗಾಗಿ ಆಡಳಿತ ಮಂಡಳಿ ಸದಸ್ಯರ ಸಹಕಾರ ಅಗತ್ಯ. ಸಂಘವನ್ನು ಮಾದರಿಯಾಗಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.
ನಿರ್ದೇಶಕರಾದ ಸಿ.ಎಸ್.ವಿಶ್ವನಾಥ್, ಸಿ.ವಿ.ಅನಂತನಾರಾಯಣ್, ಸಿ.ಎಸ್.ಚಂದ್ರಶೇಖರ ಮೂರ್ತಿ, ಸಿ.ಎಸ್.ಸುಬ್ರಹ್ಮಣ್ಯ, ನಾಗೇಗೌಡ, ಸಿದ್ದಲಿಂಗನಾಯಕ, ಸಿ.ಡಿ.ದೇವೇಂದ್ರ, ಪ್ರಭಾವತಿ, ಯಶೋದಮ್ಮ, ಮಹದೇವಮ್ಮ, ಎಂಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಡಿ.ಚಂದ್ರು, ಸಂಘದ ಸಿಇಒ ಪರಮೇಶ್, ಚಕ್ಕೂರು, ಕಾಳಿಹುಂಡಿ, ಶಂಕಹಳ್ಳಿ ಗ್ರಾಮಸ್ಥರು ಹಾಜರಿದ್ದರು.