ಹುಬ್ಬಳ್ಳಿ: ತಾಲೂಕಿನ ಪಾಲಿಕೊಪ್ಪದ ಶ್ರೀ ಕ್ಷೇತ್ರ ಶಿವಶಕ್ತಿಧಾಮದಲ್ಲಿ ಭಾದ್ರಪದ ಕೃಷ್ಣ ಅಮವಾಸ್ಯೆಯಿಂದ ಶರನ್ನವರಾತ್ರಿ ಮಹೋತ್ಸವ ಆಚರಿಸಲಾಗುವದು.
ಶ್ರೀ ಶೃಂಗೇರಿ ಜಗದ್ಗುರುವರ್ಯರಾದ ಶ್ರೀ ಭಾರತೀತೀರ್ಥ ಮಹಾಸನ್ನಿದಾನಂಗಳು ಹಾಗೂ ತತ್ಕರಕಮಲ ಸಂಜಾತ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿದಾನಂಗಳವರ ಪೂರ್ಣಾನುಗ್ರಹದಿಂದ ಶ್ರೀ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವ ಆಚರಿಸಲಾಗುತ್ತಿದೆ.
ಸೆಪ್ಟೆಂಬರ್ 21ರಂದು ಅಮಾವಾಸ್ಯೆಯಂದು ಜ್ಞಾನಾಂಬಿಕಾ ಅಮ್ಮನವರಿಗೆ ಮಹಾಭಿಷೇಕ, ಸೆ. 22- ರಿಂದ ಅಮ್ಮನವರಿಗೆ ವಿಶೇಷ ಶ್ರೀಚಕ್ರ ಪೂಜೆ, ಚಂಡಿಕಾ ಪಾರಾಯಣ, ಮಂಗಳಾರತಿ, ಮಧ್ಯಾಹ್ನ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಸಂಜೆ ಲಲಿತಾ ಸಹಸ್ರನಾಮ ಪಾರಾಯಣ ಹಾಗೂ ಸಹಸ್ರನಾಮ ಕುಂಕುಮಾರ್ಚನೆ, 7.30ಕ್ಕೆ ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ ನಡೆಯಲಿದೆ.
ವಿಶೇಷವಾಗಿ ವಿಜಯದಶಮಿಯಂದು ಮಧ್ಯಾನ್ಹ 12ರ ವರೆಗೆ 5 ವರ್ಷದೊಳಗಿನ ಮಕ್ಕಳಿಗೆ ಅಕ್ಷರಾಭ್ಯಾಸ ಪೂಜೆ ಮಾಡಲಾಗುತ್ತದೆ.
ಭಕ್ತರು ಶರನ್ನವರಾತ್ರಿ ಮಹೋತ್ಸವದಲ್ಲಿ ಪಾಲ್ಗೊಂಡು ಭಗವಂತನ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನ ಅರ್ಚಕರು ಮನವಿ ಮಾಡಿದ್ದಾರೆ.