ಹುಬ್ಬಳ್ಳಿ: ತಾಲೂಕಿನ ಪಾಲಿಕೊಪ್ಪದ ಶ್ರೀ ಕ್ಷೇತ್ರ ಶಿವಶಕ್ತಿಧಾಮದಲ್ಲಿ ಪ್ರಥಮ ವರ್ಷದ ಗಣೇಶೋತ್ಸವ ಆಚರಿಸಲು ನಿರ್ಧರಿಸಲಾಗಿದೆ.
ಆ. 27ರಂದು ಶ್ರೀಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಐದು ದಿನಗಳ ಕಾಲ ಉತ್ಸವ ನಡೆಯಲಿದೆ. ಆ. 31ರಂದು ಸಂಜೆ ವಿಸರ್ಜನೆ ಮಾಡಲಾಗುವುದು.
ಶೃಂಗೇರಿ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿದಾನ ಹಾಗೂ ತತ್ಕರಕಮಲ ಸಂಜಾತ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿದಾನಂಗಳವರ ಪೂರ್ಣಾನುಗ್ರಹದಿಂದ ವಿಶ್ವಾವಸು ಸಂವತ್ಸರದ ಭಾದ್ರಪದ ಶುಕ್ಲ ಚತುರ್ಥಿಯಿಂದ ಅಷ್ಟಮಿಯವರೆಗೆ ಗಣೇಶ ಉತ್ಸವ ನೆರವೇರಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.