ಶಿವಶಕ್ತಿ ಶುಗರ್ಸ್‌ಗೆ ಬೆಸ್ಟ್ ಟೆಕ್ನಿಕಲ್ ಎಫಿಶಿಯನ್ಸಿ ಪ್ರಶಸ್ತಿ

21Manjari3
ಕೋರೆ ಒಡೆತನದ ಶಿವಶಕ್ತಿ ಶುಗರ್ ಸಕ್ಕರೆ ಕಾರ್ಖಾನೆಗೆ ಸಚಿವ ಶಿವಾನಂದ ಪಾಟೀಲ ‘ಬೆಸ್ಟ್ ಟೆಕ್ನಿಕಲ್ ಎಫಿಶಿಯನ್ಸಿ’ ಪ್ರಶಸ್ತಿ ನೀಡಿದರು. ಎಂ.ಎಸ್.ಮುಲ್ಲಾ, ಪಾಂಡು ಬಡಗನವರ, ವಿಜಯ ಪಾಟೀಲ, ಮುರಲಿ ರಾಜಾನುಗಮ ಇತರರಿದ್ದರು.
Published on

ಮಾಂಜರಿ: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹಾಗೂ ನವದೆಹಲಿಯ ರಾಷ್ಟ್ರೀಯ ಸಕ್ಕರೆ ಕಾರ್ಖಾನೆ ಮಹಾಮಂಡಲ ನಿರ್ದೇಶಕ ಅಮಿತ್ ಕೋರೆ ಒಡೆತನದ ರಾಯಬಾಗ ತಾಲೂಕಿನ ಸೌಂದತ್ತಿ ಶಿವಶಕ್ತಿ ಶುಗರ್ಸ್ ಕಾರ್ಖಾನೆ 2024-25ನೇ ಸಾಲಿನ ಕಬ್ಬುನುರಿಸುವ ಹಂಗಾಮಿನಲ್ಲಿ ಉತ್ತಮ ಕಾರ್ಯನಿರ್ವಹಿಸಿದ್ದಕ್ಕಾಗಿ ಖಾಸಗಿ ಸಕ್ಕರೆ ಕಾರ್ಖಾನೆ ಗುಂಪಿನಲ್ಲಿ ರಾಜ್ಯಮಟ್ಟದ ‘ಬೆಸ್ಟ್ ಟೆಕ್ನಿಕಲ್ ಎಫಿಶಿಯನ್ಸಿ’ ಪ್ರಶಸ್ತಿಯನ್ನು ಬೆಳಗಾವಿಯ ಎಸ್. ನಿಜಲಿಂಗಪ್ಪ ಶುಗರ್ ಇನ್‌ಸ್ಟಿಟ್ಯೂಟ್‌ನಲ್ಲಿ ಶನಿವಾರ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಚಿವ ಶಿವಾನಂದ ಪಾಟೀಲ ಪ್ರಶಸ್ತಿ ವಿತರಿಸಿದರು. ಅವರು ಮಾತನಾಡಿ, ಡಾ. ಪ್ರಭಾಕರ ಕೋರೆ ಹಾಗೂ ಅಮಿತ್ ಕೋರೆ ಸೌಂದತ್ತಿ ಗ್ರಾಮದಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಿಸಿ ರಾಯಬಾಗ, ಚಿಕ್ಕೋಡಿ, ಅಥಣಿ ಹಾಗೂ ಇನ್ನಿತರ ತಾಲೂಕು ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಿ ಮಾದರಿಯಾಗಿದ್ದಾರೆ. ಸಕ್ಕರೆ ಉದ್ಯಮದ ಜತೆಗೆ ಅವರು ಕೈಗೊಂಡಿರುವ ಉತ್ತಮ ಕಾರ್ಯಗಳು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದಲ್ಲಿ ಮಾದರಿಯಾದ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ದೊರೆಕಿದೆ ಎಂದರು. ಸಕ್ಕರೆ ಕಾರ್ಖಾನೆ ಅಧಿಕಾರಿಗಳಾದ ಬಿ.ಎ.ಪಾಟೀಲ, ಎಂ.ಎಸ್.ಮುಲ್ಲಾ, ಮುರಲಿ ರಾಜಗುನಮ, ಪಾಂಡು ಬಡಗಣ್ಣವರ, ವಿಜಯ ಪಾಟೀಲ, ಸಂಜಯ ಯಾದವ, ಬಿ.ಎಸ್.ನಿಪ್ಪಾಣಿ, ರವಿ ಖಂಡಗಾವಿ, ಕೇಶವ ಪ್ರಸಾದ, ರಾಜಕುಮಾರ ಬೂಬನಾಳೆ, ಅಮಿತ್ ಕೋರೆ, ಸಂಗಪ್ಪ ಶಿಂಧೆ, ಬಿ.ಎಸ್.ಮುಧೋಳ, ಎಸ್. ಬೆಳೆಸ, ಸತೀಶ ಪಾಟೀಲ, ಮಹಾಂತೇಶ ಕಾಡಾಪುರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net