ಸದಾಶಿವ ದೇವಳದಲ್ಲಿ ಶಿವಾರ್ಪಣಂ ಶ್ರಮದಾನ

New Project (32)
Published on

ಬದಿಯಡ್ಕ: ಶಿವಾರ್ಪಣಂ ಶ್ರಮದಾನ ಸೇವೆ ಅಭೂತಪೂರ್ವವಾಗಿ ಎಲ್ಲರೂ ಒಂದಾಗಿ ಹಂತ ಹಂತವಾಗಿ ಮುಂದುವರಿಯುತ್ತಿರವುದು ಆ ದೇವ ಸಾನ್ನಿಧ್ಯವನ್ನು ತೋರಿಸುತ್ತದೆ. ಎಲ್ಲರೂ ಕೈಜೋಡಿಸಿ ಇನ್ನಷ್ಟು ಕಾರ್ಯಗಳಲ್ಲಿ ಮುಂದುವರಿಯೋಣ ಎಂದು ಡಾ.ವೈ.ಸುಬ್ರಾಯ ಭಟ್ ಕರೆ ನೀಡಿದರು.

ಏತಡ್ಕ ಸದಾಶಿವ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಸೋಮವಾರ ಹಮ್ಮಿಕೊಂಡಿರುವ ಶಿವಾರ್ಪಣಂ ಶ್ರಮದಾನ ಸೇವೆ, ಆಮಂತ್ರಣ ಪತ್ರಿಕೆ ವಿತರಣೆ ಉದ್ಘಾಟಿಸಿ ಮಾತನಾಡಿದರು.

ವಿವಿಧ ಸಂಘಟನೆಗಳ ನೇತಾರರಾದ ಬಾಲಕೃಷ್ಣ್ಣ ಕೆ.ಕೆ.ಕುಂಡಾಪು, ಕೆ.ನರಸಿಂಹ ಭಟ್, ವರುಂಬುಡಿ ನಾರಾಯಣ ಭಟ್, ಉಷಾ ಬಾಲಕೃಷ್ಣ್ಣ, ಶಶಿಪ್ರಭಾ ವರುಂಬುಡಿ ಅವರಿಗೆ ಆಮಂತ್ರಣ ಪತ್ರಿಕೆ ವಿತರಿಸಿದರು.

ವಿನೂತನ ಶಿವಾರ್ಪಣಂ ಯೋಜನೆ ಅನುಕರಣೀಯವಾಗಿದೆ. ಸಮಾಜಕ್ಕೆ ಪರಿಸರಸ್ನೇಹಿ ಸಂದೇಶ ನೀಡುವಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಯಶಸ್ವಿಯಾಗಲಿ ಎಂದು ಸಮಿತಿ ಉಪಾಧ್ಯಕ್ಷ ಡಾ.ವೇಣುಗೋಪಾಲ ಕಳೆಯತ್ತೋಡಿ ವಿವರಿಸಿದರು. ಉಷಾ ಬಾಲಕೃಷ್ಣ ಕುಂಡಾಪು ಶಿವಾರ್ಪಣಂ ಯೋಜನೆಗಾಗಿ ಹೊಲಿದ ಬಟ್ಟೆ ಚೀಲವನ್ನು ಅರ್ಪಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವೈ.ಶ್ಯಾಮ ಭಟ್ ಅಧ್ಯಕ್ಷತೆ ವಹಿಸಿದ್ದರು.

ಮಾತೃ ಮಂಡಳಿ ಸಂಚಾಲಕಿ ಉಷಾ ಶ್ಯಾಮ ಭಟ್, ಖಜಾಂಜಿ ವೈ.ವಿ.ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ಆಶಾ ಗಂಗಾ ಪ್ರಾರ್ಥನೆಗೈದರು. ಚಂದ್ರಶೇಖರ ಏತಡ್ಕ ಕಾರ್ಯಕ್ರಮ ನಿರೂಪಿಸಿದರು. ಧಾರ್ಮಿಕ ಸಮಿತಿ ಸಂಚಾಲಕ ಗಣರಾಜ ಕಡೇಕಲ್ಲು ವಂದಿಸಿದರು.

ದರ್ಬೆೆ ಹುಲ್ಲು ವಿಭಾಗೀಕರಣ, ಪಲಾಶ ಸಮಿತ್ತು ಮಾಡುವುದು, ಅಲಂಕಾರಿಕ ಹೂವಿನ ಸಿದ್ಧತೆ ಮುಂತಾದ ವಿಶಿಷ್ಟ ಶ್ರಮದಾನ ಸೇವೆಯಲ್ಲಿ ಕರಸೇವಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net