ಶಿವರಾತ್ರಿ ವಿಶೇಷ ಪ್ರವಚನ ಇಂದಿನಿಂದ

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಶಿವರಾತ್ರಿ ನಿಮಿತ್ತ ಇಲ್ಲಿನ ಗಾಂಧಿನಗರದ ಶ್ರೀ ಈಶ್ವರ ದೇವಸ್ಥಾನ ವಿಶ್ವಸ್ಥ ಮಂಡಳಿ ಟ್ರಸ್ಟ್​ ವತಿಯಿಂದ ಫೆ. 23ರಿಂದ 26ರವರೆಗೆ ಸಂಜೆ 7.30ರಿಂದ ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವರಿಂದ ಮಹಾಶಿವರಾತ್ರಿ ಮಹಾತ್ಮೆ ಪ್ರವಚನ ಮಾಲಿಕೆ ಏರ್ಪಡಿಸಿದೆ.

ಫೆ. 26ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ವೈದ್ಯ ಡಾ. ನಿತಿನ್​ಚಂದ್ರ ಹತ್ತಿಕಾಳ ಅತಿಥಿಯಾಗಿ ಆಗಮಿಸುವರು. ಟ್ರಸ್ಟ್​ ಅಧ್ಯಕ್ಷ ಗುರುರಾಜ ಹುಣಸಿಮರದ ಅಧ್ಯಕ್ಷತೆ ವಹಿಸುವರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 9 ಗಂಟೆಗೆ ನವಲಗುಂದದ ಅಜಾತ ಶ್ರೀನಾಗಲಿಂಗ ಲೀಲೆ ನಾಟಕ ಪ್ರದರ್ಶನಗೊಳ್ಳಲಿದೆ.

ಫೆ. 26ರಂದು ಮಹಾಶಿವರಾತ್ರಿಯ ಪ್ರಾತಃಕಾಲ 5 ಗಂಟೆಗೆ ಏಕಾದಶ ಮಹಾರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ನಡೆಯಲಿವೆ.ಫೆ. 27ರಂದು ರಾತ್ರಿ 8 ಗಂಟೆಗೆ ಮಹಾಪ್ರಸಾದದ ದಾಸೋಹ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net