

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿನ ವಿವಿಧ ದೇವಸ್ಥಾನಗಳಲ್ಲಿ ಬುಧವಾರ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆಗಳು ಜರುಗಿದವು.
ಬೆಟ್ಟದಪುರದ ಶ್ರೀ ಸಿಡಿಲು ಮಲ್ಲಿಕಾರ್ಜುನಸ್ವಾಮಿ, ಶಕ್ತಿದೇವತೆ ಶ್ರೀ ಶಾಂತವೀರಮ್ಮ, ಶ್ರೀ ಏಣಿ ಹನುಮಂತಸ್ವಾಮಿ, ಚಪ್ಪರದಹಳ್ಳಿ ಗ್ರಾಮದ ಶ್ರೀ ಕೊಳ್ಳಿ ಮಲ್ಲಿಕಾರ್ಜುನಸ್ವಾಮಿ, ಶ್ರೀ ಲಕ್ಷ್ಮೀದೇವಿ ನಂಜುಂಡೇಶ್ವರ, ಶ್ರೀ ಲಕ್ಷ್ಮೀದೇವಿ ಭೈರವೇಶ್ವರ, ಶ್ರೀ ಚಾಮುಂಡೇಶ್ವರಿ ದೇಗುಲ, ಅಂಬಲಾರೆ ಗ್ರಾಮದ ಶ್ರೀ ಈಶ್ವರ, ಶ್ರೀ ಗಣಪತಿ ದೇಗುಲ, ಅತ್ತಿಗೋಡು ಗ್ರಾಮದ ಶ್ರೀ ಈಶ್ವರ ದೇವಾಲಯ, ಸೂಳೆಕೋಟೆ ಗ್ರಾಮದ ಶ್ರೀ ಮಾರುತಿ, ಹೊಳೆ ಹನುಮಂತರಾಯ ಗುಡಿ, ಸುರಗಳ್ಳಿ ಗ್ರಾಮದ ಶ್ರೀ ಅಂಕನಾಥೇಶ್ವರ ದೇಗುಲ, ಕಣಗಾಲು ಗ್ರಾಮದ ಶ್ರೀ ದಿಡ್ಡಿಯಮ್ಮ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಶಿವರಾತ್ರಿ ವಿಶೇಷ ಪೂಜೆ ನಡೆಯಿತು.
ಶಿವನ ದೇವಾಲಯದಲ್ಲಿ ರಾತ್ರಿಯಿಡೀ ಶಿವನ ನಾಮಸ್ಮರಣೆ ಜತೆ ಭಕ್ತರು ಜಾಗರಣೆ ಮಾಡಿದರು. ದೇವಸ್ಥಾನಗಳನ್ನು ವಿವಿಧ ಹೂ, ತೋರಣಗಳಿಂದ ಅಲಂಕರಿಸಲಾಗಿತ್ತು.
26ಬಿಟಿಪಿ01: ಶಿವರಾತ್ರಿ ಹಬ್ಬದ ಹಿನ್ನಲೆ ಚಪ್ಪರದಹಳ್ಳಿ ಗ್ರಾಮದ ಶ್ರೀ ಕೊಳ್ಳಿ ಮಲ್ಲಿಕಾರ್ಜುನಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಕೈಕಂರ್ಯಗಳು ಜರುಗಿದವು.