ಪುನರೂರು ಕ್ಷೇತ್ರದಲ್ಲಿ ಶಿವರಾತ್ರಿ ಪೂಜೆ

New Project (22)
Published on

ಕಿನ್ನಿಗೋಳಿ: ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವದ ಪ್ರಯುಕ್ತ ಅಹೋರಾತ್ರಿ ಭಜನಾ ಕಾರ್ಯಕ್ರಮಕ್ಕೆ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವರಾವ್ ಚಾಲನೆ ನೀಡಿದರು. ದೇವಸ್ಥಾನದ ಅರ್ಚಕ ಶಶಾಂಕ್ ಮುಚ್ಚಿಂತಾಯ ಶತ ರುದ್ರಾಭಿಷೇಕ ರುದ್ರ ಪಾರಾಯಣ ನಡೆಸಿಕೊಟ್ಟರು.

ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ರಾಮಮೂರ್ತಿ ರಾವ್, ಪಟೇಲ್ ವಿಶ್ವನಾಥ್ ರಾವ್, ಪುನರೂರು ವಿಪ್ರಸಂಪದ ಸುಧಾಕರ್ ರಾವ್, ರಾಮ ಭಟ್, ದೇವಪ್ರಸಾದ್ ಪುನರೂರು, ಕೃಷ್ಣ ಮೂರ್ತಿ ರಾವ್, ಗೋಪಿನಾಥ್ ರಾವ್, ರಾಘವೇಂದ್ರ ರಾವ್ ಕೆರೆಕಾಡು, ರಮೇಶ್ ರಾವ್ ರವಿಶೆಟ್ಟಿ, ಪುನರೂರು ಗುತ್ತು ಉಪಸ್ಥಿತರಿದ್ದರು. ಬಳಿಕ ಅಹೋರಾತ್ರಿ ಭಜನಾ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net