ಹುಬ್ಬಳ್ಳಿ: ಇಲ್ಲಿಯ ನವನಗರದ ಬಸವಾ ಎಸ್ಟೇಟ್ ನಲ್ಲಿ ಶ್ರೀ ವಿಶ್ವೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಜಾಗರಣೋತ್ಸವ ಸಮಿತಿ ವತಿಯಿಂದ ಫೆ. 26ರಂದು ಶಿವರಾತ್ರಿ ಅಂಗವಾಗಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 7ಕ್ಕೆ ಅಭಿಷೇಕ, ಸಂಜೆ 6ಕ್ಕೆ ಶ್ರೀ ಚಿದಂಬರ ಭಜನಾ ಮಂಡಳಿಯಿಂದ ಭಜನೆ, 6.30ಕ್ಕೆ ಶ್ರೀ ಗಿರೀಜಾ ಭಜನಾ ಮಂಡಳಿಯಿಂದ ಭಜನೆ, 7ಕ್ಕೆ ದೇವಸ್ಥಾನದ ಶ್ರೇಯೋಭಿವೃದ್ಧಿಗೆ ದೇಣಿಗೆ ನೀಡಿದ ಭಕ್ತರಿಗೆ ಸನ್ಮಾನ, 7.30ಕ್ಕೆ ವಿದ್ಯಾ ದೀಕ್ಷಿತ ಹಾಗೂ ಶಿಷ್ಯ ವೃಂದದಿಂದ ಸಂಗೀತ ಸೇವೆ ನಂತರ ಅಲ್ಪೋಪಹಾರದ ವ್ಯವಸ್ಥೆ ಮಾಡಲಾಗಿದೆ. ರಾತ್ರಿ 10ಕ್ಕೆ ಶ್ರೀ ವಿಶ್ವೇಶ್ವರ ದೇವರಿಗೆ ಯಾಮ ಪೂಜೆ.
ಫೆ. 27ರಂದು ಬೆಳಗ್ಗೆ 7ಕ್ಕೆ ಶ್ರೀ ವಿಶ್ವೇಶ್ವರ ದೇವರಿಗೆ ಅಭಿಷೇಕ, ಬೆಳಗ್ಗೆ 9ರಿಂದ ಮಹಾಪ್ರಸಾದ ನೆರವೇರಿಸಲಾಗುವದು. ಸಂಜೆ 6ಕ್ಕೆ ಶ್ರೀ ದತ್ತ ಮಹಾರಾಜರಿಗೆ ಪಲ್ಲಕ್ಕಿ ಸೇವೆ ನಡೆಸಲಾಗುವದು. ಭಕ್ತರು ಪಾಲ್ಗೊಳ್ಳಬೇಕೆಂದು ಜಾಗರಣೋತ್ಸವ ಸಮಿತಿ ಅಧ್ಯಕ್ಷ ರತ್ನಾಕರ ಕುಲಕರ್ಣಿ ಕೋರಿದ್ದಾರೆ.