

ಕಾರ್ಕಳ: ಶ್ರೀಕ್ಷೇತ್ರ ಅಡಪಾಡಿ ಶ್ರೀ ಉಮಾಮಹೇಶ್ವರ, ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಶಿವರಾತ್ರಿ ಮಹೋತ್ಸವ, ರಥೋತ್ಸವ ಫೆ.25ರಿಂದ 27ರವರೆಗೆ ವಿವಿಧ ಧಾರ್ಮಿಕ ಅನುಷ್ಠಾನಗಳೊಂದಿಗೆ ನಡೆಯಲಿದೆ.
25ರಂದು ಬೆಳಗ್ಗೆ 9ರಿಂದ ಫಲಾನ್ಯಾಸ, ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಧ್ವಜಾರೋಹಣ, ಆದ್ಯ ಗಣಪತಿ ಯಾಗ, ನವಕ ಪ್ರಧಾನ ಹೋಮ, ಕಲಶಾಭಿಷೇಕ, ಪಂಚಾಮೃತಾಭಿಷೇಕ, ಪರಿವಾರ ದೈವಗಳ ಆರಾಧನೆ, ಮಹಾಪೂಜೆ, ಬಲಿ ಸಂತರ್ಪಣೆ, ಸಾಯಂಕಾಲ 7ರಿಂದ ಕಲ್ಪೋಕ್ತ ಪೂಜೆ, ರಂಗಪೂಜೆ, ಬಲಿ ಜರುಗಲಿದೆ. 26ರಂದು ಬೆಳಗ್ಗೆ 7ರಿಂದ ನವಕ ಪ್ರಧಾನ ಹೋಮ, ಕಲಶಾಭಿಷೇಕ, ಪಂಚಾಮೃತಾಭಿಷೇಕ, ಲಘುರುದ್ರಾಭಿಷೇಕ, ಲಘುರುದ್ರಸ್ವಾಹಾಕಾರ, ಮಹಾಪೂಜೆ, ಬಲಿ, ರಜತ ಪಲ್ಲಕಿ ಉತ್ಸವ, ಪಲ್ಲಪೂಜೆ, ರಥೋತ್ಸವ, ಅನ್ನಸಂತರ್ಪಣೆ, ಬೆಳಗ್ಗೆ 10ರಿಂದ ಆರ್‌ಎಸ್‌ಬಿ ಮಹಿಳಾ ವೇದಿಕೆ ಭಜನಾ ಮಂಡಳಿ ಮಣಿಪಾಲ ಅವರಿಂದ ಭಜನೆ, ಸಂಜೆ 6.30ರಿಂದ ಶ್ರೀ ನರಸಿಂಹ ಭಜನಾ ಮಂಡಳಿ ನರಸಿಂಗೆ ಅವರಿಂದ ಭಜನೆ, ಸಂಜೆ ಕಲ್ಪೋಕ್ತ ಪೂಜೆ, ರಂಗಪೂಜೆ, ಮಹಾಬಲಿ ಉತ್ಸವ, ರಥೋತ್ಸವ, ವಸಂತ ಮಂಟಪದಲ್ಲಿ ಅಷ್ಟಾವಧಾನ ಸೇವೆ, ಪ್ರಸಾದ ವಿತರಣೆ, ರಾತ್ರಿ 9ರಿಂದ ಯಕ್ಷಾಭಿಮಾನಿ ಬಳಗ ಓಂತಿಬೆಟ್ಟು ಪಡ್ಡಾಂ ಅವರಿಂದ ಯಕ್ಷಗಾನ ಕಂಸವಧೆ, ರಾತ್ರಿ 10ರಿಂದ ಚೈತನ್ಯ ಕಲಾವಿದರು ಬೈಲೂರು ಅವರಿಂದ ಸಾಂಸಾರಿಕ ತುಳು ನಾಟಕ ‘ಅಷ್ಟೆಮಿ’ ಪ್ರದರ್ಶನಗೊಳ್ಳಲಿದೆ. ರಾತ್ರಿ 12ರಿಂದ ಶ್ರೀ ಮಹಾಕಾಳಿ ಭಜನಾ ಮಂಡಳಿ ಮಂಗಲ್ದಿಮಠ, ಪಳ್ಳಿ ಸಹಯೋಗದೊಂದಿಗೆ ಅಹೋರಾತ್ರಿ ಭಜನಾ ಕಾರ್ಯಕ್ರಮ ನಡೆಯಲಿದೆ.
27ರಂದು ಬೆಳಗ್ಗೆ 9ರಿಂದ ಅವಭೃತ ಸ್ನಾನ, ಕಟ್ಟೆಪೂಜೆ, ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ದರ್ಶನ ಸೇವೆ, ಪ್ರಸಾದ ವಿತರಣೆ, ಧ್ವಜ ಅವರೋಹಣ, ಸಂತರ್ಪಣೆ, ಸಂಜೆ 6ರಿಂದ ಕಲ್ಪೋಕ್ತ ಪೂಜೆ, ಧರ್ಮ ದೈವಗಳ ನೇಮೋತ್ಸವ ಜರುಗಲಿದೆ ಎಂದು ಶ್ರೀಕ್ಷೇತ್ರದ ಧರ್ಮದರ್ಶಿ ಪುಂಡಲೀಕ ನಾಯಕ್ ತಿಳಿಸಿದ್ದಾರೆ.