ಕಲಘಟಗಿಯಲ್ಲಿ ಶಿವರಾತ್ರಿ ಸಡಗರ

KLG MALLIKARJUN SWAMI
Published on

ಕಲಘಟಗಿ: ಪಟ್ಟಣ ಸೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬುಧವಾರ ಶಿವರಾತ್ರಿ ಹಬ್ಬವನ್ನು ಭಕ್ತರು ಶ್ರದ್ಧಾ-ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಿದರು.

ತಾಲೂಕಿನ ವಿವಿಧ ಶಿವ ದೇವಾಲಯಗಳಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಪಟ್ಟಣದ ಬೆಂಡಿಗೇರಿ ಓಣಿಯ ಮಲ್ಲಿಕಾರ್ಜುನ ದೇವಾಲಯ, ಕಲ್ಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ, ವಿಧಿವಿಧಾನಗಳು ನಡೆದವು. ಬೆಳಗ್ಗೆಯಿಂದಲೇ ಭಕ್ತರು ಶಿವಾಲಯಗಳಿಗೆ ತೆರಳಿ ದೇವರ ದರ್ಶನಕ್ಕೆ ಪಡೆದರು. ಹೂವು-ಹಣ್ಣು ಅರ್ಪಿಸಿ ಭಕ್ತಿ ಸಮರ್ಪಿಸಿದರು.

ಹಣ್ಣುಗಳಾದ ದಾಳಿಂಬೆ, ಲಿಂಬೆ, ಚಿಕ್ಕು, ಮೂಸಂಬಿ, ಖರ್ಜೂರ, ದ್ರಾಕ್ಷಿಯಿಂದ ದೇವಸ್ಥಾನದಲ್ಲಿರುವ ಕತೃ ಗದ್ದುಗೆಯನ್ನು ಶೃಂಗರಿಸಲಾಗಿತ್ತು. ತಾವರಗೇರಿ, ದೇವಿಕೊಪ್ಪ, ಹಿರೆಹೊನ್ನಳ್ಳಿ, ಗಂಭ್ಯಾಪುರ, ದುಮ್ಮವಾಡ, ಮಿಶ್ರೀಕೋಟಿ, ಗಂಜಿಗಟ್ಟಿ, ಬೀರವಳ್ಳಿ, ಮುತ್ತಗಿ, ಬಮ್ಮಿಗಟ್ಟಿ, ಬೆಲವಂತರ ಸೇರಿ ತಾಲೂಕಿನ ವಿವಿಧ ಹಳ್ಳಿಗಳ ದೇವಾಲಯಗಳಲ್ಲಿ ವಿಶೇಷ ಪೂಜೆಗಳ ನಡೆದವು. ಭಕ್ತರು ಉಪವಾಸ ಹಾಗೂ ಜಾಗರಣೆ ಮಾಡಿ ಧನ್ಯತಾಭಾವ ಮೆರೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net