

ಹುಬ್ಬಳ್ಳಿ : ಇಲ್ಲಿನ ರೇಣುಕಾ ನಗರದ ಚಿನ್ಮಯ ಧಾಮದಲ್ಲಿ ಚಿನ್ಮಯ ಮಿಷನ್ ವತಿಯಿಂದ ಫೆ. 19 ರಿಂದ 25ರವರೆಗೆ ಶಿವರಾತ್ರಿ ಹಬ್ಬ ಆಚರಿಸಲಾಗುತ್ತಿದೆ.
ನಿತ್ಯ ಸಂಜೆ 6 ಗಂಟೆಗೆ ವಿವಿಧ ಭಜನಾ ಮಂಡಳಿಗಳಿಂದ ಶಿವ ಸಹಸ್ರನಾಮ, ಅರ್ಚನೆ, ಭಜನೆ ನಡೆಯಲಿದೆ. 26ರಂದು ಶಿವರಾತ್ರಿ ನಿಮಿತ್ತ ಬೆಳಗ್ಗೆ 7 ಗಂಟೆಗೆ ರುದ್ರಾಭಿಷೇಕ, ಬೆಳಗ್ಗೆ 11ಗಂಟೆಯವರೆಗೆ ಏಕಾದಶವಾರ ರುದ್ರಾಭಿಷೇಕ, ಮಂಗಳಾರತಿ, ಸಂಜೆ 5.30 ರವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಸಂಜೆ 6 ರಿಂದ 7 ಗಂಟೆಯವರೆಗೆ ರುದ್ರಾಭಿಷೇಕ ನಂತರ ಚಿನ್ಮಯ ವಿದ್ಯಾಲಯದ ಸಂಗೀತ ಶಿಕ್ಷಕರಿಂದ ಹಾಗೂ ಇತರರಿಂದ ಭಜನೆ, ಶಿವ ಸ್ತೋತ್ರಗಳು ನಡೆಯಲಿವೆ. ಮಧ್ಯರಾತ್ರಿ 12ಗಂಟೆಗೆ ಮಹಾ ಮಂಗಳಾರತಿ ಹಾಗೂ ಪ್ರಸಾದ ವಿತರಣೆ ಇರುತ್ತದೆ. ಭಕ್ತರು ಪಾಲ್ಗೊಳ್ಳುವಂತೆ ಚಿನ್ಮಯ ಮಿಷನ್ ಹುಬ್ಬಳ್ಳಿ ಅಧ್ಯಕ್ಷ ಪಾಂಡುರಂಗ ನಾಯ್ಡು ತಿಳಿಸಿದ್ದಾರೆ.