ಪರಕ್ಕಿಲದಲ್ಲಿ ಶಿವರಾತ್ರಿ ಸಾಂಸ್ಕೃತಿಕ ವೈವಿಧ್ಯ

10
Published on

ಮಧೂರು: ಶಿವರಾತ್ರಿಯಂಗವಾಗಿ ಪರಕ್ಕಿಲ ಶ್ರೀ ಮಹಾದೇವ ಶಾಸ್ತಾ ವಿನಾಯಕ ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ಉಳಿಯತ್ತಾಯ ವಿಷ್ಣು ಆಸ್ರ ಧಾರ್ಮಿಕ ವಿಧಿ-ವಿಧಾನಗಳ ನೇತೃತ್ವ ವಹಿಸಿದ್ದರು. ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ವಯಲಿನ್ ವಾದನ ಜರುಗಿತು. ಹಾಡುಗಾರಿಕೆಯಲ್ಲಿ ಸರಸ್ವತಿ ಕೃಷ್ಣನ್ ಕುಮಾರಮಂಗಲ, ವಯಲಿನ್‌ನಲ್ಲಿ ವಿದ್ವಾನ್ ಪ್ರಭಾಕರ ಕುಂಜಾರು ಮತ್ತು ಶ್ರೀವಿದ್ಯಾ, ಮೃದಂಗದಲ್ಲಿ ಕೆ.ಶ್ರೀಧರ ರೈ ಸಹಕರಿಸಿದರು. ಅಮೃತ ಕಲಾಕ್ಷೇತ್ರ ರಾಮದಾಸನಗರ ತಂಡದಿಂದ ಶಾಸ್ತ್ರೀಯ ನೃತ್ಯ, ಪರಕ್ಕಿಲ ಬಾಲಗೋಕುಲ ಮತ್ತು ಪರಕ್ಕಿಲ ಅಂಗನವಾಡಿ ಮಕ್ಕಳಿಂದ ನೃತ್ಯ, ತರುಣ ಕಲಾವೃಂದ ಮಹಿಳಾ ಸದಸ್ಯೆಯರಿಂದ ತಿರುವಾದಿರ ಫ್ಯೂಷನ್, ಶ್ರೀರಕ್ಷಾ ರಾಮ್ ಕಿಶೋರ್ ಮತ್ತು ಧನ್ಯಮುರಳಿ ಆಸ್ರ ಅವರಿಂದ ಭರತನಾಟ್ಯ ಜರುಗಿತು. ತರುಣ ಕಲಾವೃಂದ ಉಳಿಯ ಮತ್ತು ಕುಟುಂಬಶ್ರೀ ಪರಕ್ಕಿಲ ಸಹಕಾರ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net